Local Bites, Global Sights

ದುಬೈ ಡ್ರೀಮ್ಸ್: ದುಬೈ ಉದ್ಯೋಗಗಳ ಅನ್ವೇಷಣೆ ಮತ್ತು ನನ್ನಅನುಭವಗಳು

ದುಬೈ ಅದರ ಬಲವಾದ ಆರ್ಥಿಕತೆ, ತೆರಿಗೆ ಮುಕ್ತ ಆದಾಯ ಮತ್ತು ಅಂತರರಾಷ್ಟ್ರೀಯ ಮಾನ್ಯತೆಯಿಂದಾಗಿ ಉದ್ಯೋಗಾವಕಾಶ ಹುಡಿಕಿ ಬರುವ ಪ್ರವಾಸಿರಿಗರಿಗೆ ಕನಸಿನ ತಾಣವಾಗಿದೆ. ಈ  ನಗರವು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ತಮ್ಮ ವೃತ್ತಿಜೀವನವನ್ನು ಬೆಳೆಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಆನಂದಿಸಲು ಬಯಸುವ ಪ್ರತಿಯೊಬ್ಬ ವೃತ್ತಿಪರರನ್ನು ಆರ್ಷಿಸುವ ನಗರವೆಂದರೆ ಅದು ದುಬೈ.

2020 ರಲ್ಲಿ, ನಾನು ಜೊಹೊದಲ್ಲಿ ನನ್ನ ಕೆಲಸವನ್ನು ಬಿಟ್ಟು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದೆ. ಆ ಸಮಯದಲ್ಲಿ,  ನನ್ನ ಕೆಲಸ ಮತ್ತು ಸಂಬಳ ಚೆನ್ನಾಗಿಯೇ ಇತ್ತು, ಆದರೆ ನನಗೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಕುತೂಹಲವಿತ್ತು. ನನ್ನ ಸಹ ಮಿತ್ರರಲ್ಲಿಯೂ, ತಿಳಿದವರ ಬಳಿಯೂ ಸಲಹೆ ಕೇಳದೆ ಕೇವಲ ಗೂಗಲ್ ಸರ್ಚನ್ನು ಮಾಡಿ ಕೆಲವು ವಿಷಯಗಳನ್ನು ನಾನು ನಾನೇ ಸ್ವತಃ ಅರಿತುಕೊಂಡು ಕೆಲಸನ್ನು ಬಿಡುವ ನಿರ್ಧಾರ ಮಾಡಿದೆ. 

ದುರದೃಷ್ಟವಶಾತ್, ನಾನು ಕೆಲಸ ಬಿಟ್ಟ  ಸ್ವಲ್ಪ ದಿನಗಳ  ನಂತರ, ಯಾವುದೋ ಒಂದು  ಸಾಂಕ್ರಾಮಿಕವು ಹರಡುತ್ತಿದೆ  ಎಂದು ಎಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿತ್ತು ದಿನ ಕಳೆಯುತ್ತಿದ್ದಂತೆ ಲಾಕ್‌ಡೌನ್‌ಗಳು ಮತ್ತು ಕ್ವಾರಂಟೈನ್ ಕ್ರಮ ಕೈಗೊಂಡು ಒಂಬತ್ತು ತಿಂಗಳ ಕಾಲ ನಿರುದ್ಯೋಗಿಯಾಗಿದ್ದೆ. ಇದು ನಾನು ನನ್ನ ಬದುಕಿನಲ್ಲಿ ಕಲೆತ ಕಷ್ಟಕರ ಜೀವನ ಪಾಠವಾಗಿತ್ತು. 

ನನಗೊದಗಿದ ಈ ಪರಿಸ್ಥಿತಿಯು ಪ್ರತ್ಯೇಕವಾಗಿ  COVID ನಿಂದ ಆಗಿದ್ದೇನು ಅಲ್ಲ. ನಮ್ಮಲ್ಲಿ ಅನೇಕರು ಅಂತರ್ಮುಖಿಗಳಾಗಿದ್ದಾರೆ ಮತ್ತು ಸವಾಲುಗಳನ್ನು ನಿಭಾಯಿಸಲು ಅಥವಾ ಬೇರೆಯವರ ಬಳಿ ಸಲಹೆ ಪಡೆಯಲು ತುಂಬಾ ಯೋಚಿಸುತ್ತಾರೆ ಮೊದಮೊದಲು ನಾನು ಹೀಗೆಯೇ ಯಾರನ್ನು ಜಾಸ್ತಿ ಪ್ರಶ್ನಿಸುತ್ತಿರಲಿಲ್ಲ ಎಲ್ಲಿಯಾದರೂ ನನ್ನ ಹಿಂದೆ ಮಾತನಾಡಿ ಟೀಕಿಸಬಹುದೆಂದು. ಅಥಾವ ನನ್ನ ಬಗ್ಗೆ ಅವರು ಏನೆಂದು ಯೋಚಿಸಿಯಾರು ಎಂದು. ಎಷ್ಟೋ ಬಾರಿ ನನಗೆ ಸಿಕ್ಕ ಅವಕಾಶಗಳನ್ನು ಉಪಯೋಗಿಸದೆ ಇದ್ದದ್ದು ಇದೆ.

ಕೆಲವರು ಬೇರೆಯವರು ಹೇಳುವ ಮಾತಿನ ಆಧಾರದ ಮೇಲೆ ತಮ್ಮ ಕೆಲಸಕ್ಕೆ ರೆಸಿಗ್ನೇಷನ್ ಕೊಡಲು  ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಎಷ್ಟೋ ತಿಂಗಳುಗಳವರೆಗೆ ಕೆಲಸವಿಲ್ಲದಿರುತ್ತಾರೆ. ನಿಮ್ಮ ಕುಟುಂಬದಲ್ಲಿ ನೀವು ಪ್ರಮುಖ ದುಡಿಯುವ ವ್ಯಕ್ತಿಯಾಗಿದ್ದರೆ  (ಕುಂಟುಬವು ನಿಮ್ಮ ಮೇಲೆ ಅವಲಂಭಿತವಾಗಿದ್ದರೆ) ಹಾಗು ನೀವು ಒಳ್ಳೆಯ  ವೃತ್ತಿಜೀವನವನ್ನು ಬಯಸುತ್ತಿದ್ದರೆ, ನಿಮ್ಮ ಪ್ರಸ್ತುತ ಕೆಲಸವನ್ನು ತೊರೆಯುವ (ರೆಸಿಗ್ನೇಷನ್ ಮಾಡುವ)  ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಅತ್ಯಗತ್ಯ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹಳಷ್ಟು ಯೋಚಿಸಿ. 

ಕೆಲಸ ಮಾಡುತ್ತಿರುವಾಗಲೇ  ಹೊಸ ಉದ್ಯೋಗವನ್ನು ಹುಡುಕಿಕೊಂಡು, ಒಮ್ಮೆ ನಿಮಗೆ ಹೊಸ ಕೆಲಸದ  ಆಫರ್ ಲೆಟರ್ ದೊರೆತ ನಂತರ ನಿಮ್ಮ ರೆಸಿಗ್ನೇಷನ್  ಪರಿವರ್ತನೆಯ ಪ್ರಕ್ರಿಯೆಯ ಕುರಿತು ನಿಮ್ಮ ಪ್ರಸ್ತುತ ಉದ್ಯೋಗದಾತರೊಂದಿಗೆ (ಕಂಪೆನಿಯವರೊಂದಿಗೆ) ಮಾತನಾಡಿ. 

ನಾನು ಈ ಪರಿಸ್ಥಿತಿಯನ್ನು ಸ್ವತಃ ಅನುಭವಿಸಿದ್ದೇನೆ ಮತ್ತು ನಾನು ನನ್ನ ಸ್ನೇಹಿತರಿಗೂ ಎಷ್ಟೇ ಬುದ್ದಿವಾದ ಹೇಳಿದರು ಕೇಳದೆ ಕೊನೆಗೆ ಕೆಲಸವಿಲ್ಲದೆ  ಕಷ್ಟಪಡುವುದನ್ನು ನಾನು ನೋಡಿದ್ದೇನೆ. ಆದ್ದರಿಂದ, ಸಮಯೋಚಿತವಾದ ಬುದ್ದಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. 

ಬನ್ನಿ ಈ ಕ್ರಿಯಾತ್ಮಕ ನಗರದಲ್ಲಿ ಯಶಸ್ಸನ್ನು ಹುಡುಕುವ ಮತ್ತು ನಿಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸುವ ಅಂಶಗಳನ್ನು ಅನ್ವೇಷಿಸೋಣ.

ಅನೇಕ ಜನರು , ಬೇರೆ ದೇಶದವರು ಕೂಡ , ಉತ್ತಮ ಆದಾಯವನ್ನು ಗಳಿಸಲು  ಮತ್ತು ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು  ತಮ್ಮ ತಾಯ್ನಾಡನ್ನು ತೊರೆದು ಹೆಚ್ಚು ಅಭಿವೃದ್ಧಿ ಹೊಂದಿದ ಅಥವಾ ಸಮೃದ್ಧ ವಿದೇಶಗಳಲ್ಲಿ ಅವಕಾಶಗಳನ್ನು ಹುಡುಕಲು ಆಯ್ಕೆ ಮಾಡುತ್ತಾರೆ. ಅವರಂತೆ ನನಗೂ ವಿದೇಶದಲ್ಲಿ ಕೆಲಸ ಮಾಡುವ ಆಸೆ ಇತ್ತು ಆದರೆ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದೆ.

ಆರಂಭದಲ್ಲಿ, ಯುರೋಪಿಯನ್ ಅಥವಾ ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಕೆಲಸ ಹುಡುಕುವುದು ನನ್ನ ಗುರಿಯಾಗಿತ್ತು. ಆದಾಗ್ಯೂ, ಹಣಕಾಸಿನ ಮಿತಿಗಳು ಮತ್ತು ನಮ್ಮವರು ಎನಿಕೊಳ್ಳಲು ಬೆಂಬಲವಿಲ್ಲದ ಕೊರತೆಯಿಂದಾಗಿ, ನಾನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) (UAE) ಗೆ ಕಾಲಿಡಲು ನಿರ್ಧರಿಸಿದೆ. 

ನನ್ನ ಮನಸ್ಸಿನಲ್ಲಿ, ನಾನು ಈಗಾಗಲೇ ಗಳಿಸಿದ್ದ ನನ್ನ ವರ್ಕ್ ಎಕ್ಸ್ಪೆರಿನ್ಸ್ ದುಬೈಯಲ್ಲಿ ಕೆಲಸವನ್ನು ಪಡೆಯಲು ನನ್ನ ವಿದ್ಯಾರ್ಹತೆಗಳು ಸಾಕು ಎಂದು ನಾನು ನಂಬಿದ್ದೆ . ಆದರೆ, ದುಬೈನಲ್ಲಿ ಉದ್ಯೋಗ ಮಾರುಕಟ್ಟೆ ನಾನು ಊಹಿಸಿದಷ್ಟು ಸರಳವಾಗಿರಲಿಲ್ಲ.

ದುಬೈ ವಿವಿಧ ಕ್ಷೇತ್ರಗಳಲ್ಲಿ ಮತ್ತು ಸ್ಥಾನಗಳಲ್ಲಿ ವ್ಯಾಪಕವಾದ ಉದ್ಯೋಗಾವಕಾಶಗಳನ್ನು ನೀಡುತ್ತದೆ. ಒಂದು ವ್ಯಕ್ತಿಗೆ  3 ರಿಂದ 4 ವರ್ಷಗಳ ವೃತ್ತಿಜೀವನದ ಅನುಭವ ಹೊಂದಿದ್ದರೂ ತಮ್ಮ ಹಿಂದಿನ ಜವಾಬ್ದಾರಿಯ ಸ್ಥಾನಗಳು ಅಂದರೆ ಕೆಲವರು ಟೀಮ್ ಲೀಡರ್ ಗಳಾಗಿದ್ದರು, ಮ್ಯಾನೇಜರ್ ಆಗಿ ಭಾರತದಲ್ಲಿ ಅಥವಾ ಇತರ ಏಷ್ಯಾದ ರಾಷ್ಟ್ರಗಳಿಂದ ಬಂದ  ಹೊಸಬರಿಗೆ, ಅದು ಯಾವುದನ್ನೂ ಲೆಕ್ಕಿಸದೆಯೇ ಟೆಲಿಕಾಲರ್‌ ಉದ್ಯೋಗಗಳೆ ಸಿಗುವುದು ಇಲ್ಲಿ ಹೆಚ್ಚು. 

ನೀವು ತಂಡದ ನಾಯಕರಾಗಿರಲಿ, ನಿರ್ವಾಹಕರಾಗಿರಲಿ ಅಥವಾ ನಿಮ್ಮ ವಿಭಾಗದಲ್ಲಿ ಪರಿಣಿತರಾಗಿರಲಿ, ದುಬೈ ಉದ್ಯೋಗ ಮಾರುಕಟ್ಟೆಯಲ್ಲಿ ಇದು ಹೆಚ್ಚು ಮುಖ್ಯವಲ್ಲ. ಕೆಲವು ಅದೃಷ್ಟವಂತ ವ್ಯಕ್ತಿಗಳು ಹೆಚ್ಚು ಕಷ್ಟವಿಲ್ಲದೆ ತಮಗೆ ಕೌಶಲ್ಯವಿರವ  (skill based)  ಸ್ಥಾನಗಳನ್ನ, ಒಳ್ಳೆಯ ಉದ್ಧೆಯನ್ನು  ಪಡೆದುಕೊಳ್ಳಬಹುದು, ಬಹುಪಾಲು ಜನರು ಸದ್ಯದ ಪರಿಸ್ಥಿತಿಗೆ ಯಾವುದಾದರೊಂದು ಕೆಲಸ ಸಿಕ್ಕಿದರೆ ಸಾಕು ಎಂದೆನಿಸಿ ಸೇರಿಬಿಡುತ್ತಾರೆ. 

ದುಬೈನಲ್ಲಿ, ಫ್ರೆಶರ್‌ಗಳಿಗೆ, ವಿಶೇಷವಾಗಿ ಏಷ್ಯನ್ನರು ಅಥವಾ ಭಾರತೀಯರು ತಮ್ಮ ತಾಯ್ನಾಡಿನಲ್ಲಿ 4 ಅಥವಾ 5 ವರ್ಷಗಳ ಅನುಭವವನ್ನು ಹೊಂದಿದ್ದರೂ, ಹಣಕಾಸು ಸಂಸ್ಥೆಗಳಲ್ಲಿ ಟೆಲಿ-ಕಾಲಿಂಗ್ ಅಥವಾ ಕ್ರೆಡಿಟ್ ಕಾರ್ಡ್ ಮಾರಾಟದ ಉದ್ಯೋಗಗಳು ಇಲ್ಲಿ ಸಿಗುತ್ತವೆ. 

ನನ್ನ ವಿಷಯದಲ್ಲಿ, ನಾನು ನನ್ನ ವೃತ್ತಿಜೀವನವನ್ನು ದುಬೈನಲ್ಲಿ ಟೆಲಿ-ಕಾಲರ್ ಆಗಿ ಪ್ರಾರಂಭಿಸಿದೆ. ನನ್ನ ದೈನಂದಿನ ಕಾರ್ಯಗಳಲ್ಲಿ 200 ರಿಂದ 300 ಗ್ರಾಹಕರಿಗೆ ಕರೆಗಳನ್ನು ಮಾಡುವುದು, ದುಬೈನ ಟಾಪ್ ಡೆವಲಪರ್‌ಗಳಿಂದ ಐಷಾರಾಮಿ ವಿಲ್ಲಾಗಳು, ಟೌನ್‌ಹೌಸ್ ಮತ್ತು ಅಪಾರ್ಟ್‌ಮೆಂಟ್‌ಗಳ ಉಡಾವಣೆಗಳನ್ನು ಮಾರ್ಕೆಟಿಂಗ್ ಮಾಡುವುದು ಮತ್ತು ಚರ್ಚಿಸುವುದು. ಕೆಲವೇ ಪದಗಳ ಮೂಲಕ ಆಸಕ್ತಿಯ ಲೀಡ್‌ಗಳನ್ನು ರಚಿಸುವ ಕೆಲಸವಾಗಿತ್ತು. 

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವುದು ಉತ್ತಮ ಆದಾಯವನ್ನು ನೀಡುತ್ತದೆ ಎಂದು ನೀವು  ಊಹಿಸಬಹುದು. ನನ್ನ ಕೆಲಸ ಮಾತ್ರವಲ್ಲ, ಯಾವುದೇ ಕಂಪೆನಿಯಲ್ಲಿ ಟೆಲಿ-ಕಾಲಿಂಗ್ ಮತ್ತು ಟೆಲಿಮಾರ್ಕೆಟಿಂಗ್ ಕೆಲಸಗಳಲ್ಲಿ, ನಿಗದಿತ ವೇತನವನ್ನು ಮೀರಿ ಸಂಬಳ  ನೀಡುವುದಿಲ್ಲ. ಕೆಲವು ಕಂಪನಿಗಳು ಮಾತ್ರ ಹೆಚ್ಚುವರಿ ಪ್ರೋತ್ಸಾಹವನ್ನುಧನವನ್ನು ನೀಡುತ್ತವೆ. 

ದುಬೈ ಎಷ್ಟೋ ವಲಸಿಗರಿಗೆ, ಆಕರ್ಷಿತ ಮತ್ತು ಸ್ವಂತ ನಾಡಿನಂತೆ ಎನಿಸಿಬಿಡುತ್ತದೆ. ಇಲ್ಲಿಗೆ ಕೆಲಸಕ್ಕೆಂದು  ಬರುವ ಪ್ರತಿಯೊಬ್ಬರು  ತಮ್ಮ ಕುಟುಂಬಗಳನ್ನು ಪೋಷಿಸಲು ಅತ್ಯಂತ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ದೂರದಲ್ಲಿರುವ ತಮ್ಮ ಪ್ರೀತಿಪಾತ್ರರ ಸಂತೋಷದಿಂದ ನೋಡಿಕೊಳ್ಳಲು ದಣಿವರಿಯದೆ ದುಡಿದು ಯಶಸ್ವಿ ವೃತ್ತಿಜೀವನದ ನಿರೀಕ್ಷೆಯಲ್ಲಿದ್ದವರಲ್ಲಿ ನಾನೂ ಒಬ್ಬಳು. 

2023 ರ ಆರಂಭದವರೆಗೆ, ದುಬೈ ಸರ್ಕಾರವು ವಿಸಿಟ್ ವೀಸಾದಲ್ಲಿ ಜನರಿಗೆ 3 ತಿಂಗಳ ಕಾಲ ಉಳಿಯಲು ಅವಕಾಶ ಮಾಡಿಕೊಟ್ಟಿತು. ಈ ಸಮಯದಲ್ಲಿ, ಮೊದಲ 2 ತಿಂಗಳುಗಳಲ್ಲಿ ಹೆಚ್ಚಿನ ಸಮಯವನ್ನು ಉದ್ಯೋಗವನ್ನು ಹುಡುಕಲು ಕಳೆದರು, ಕೆಲವೊಮ್ಮೆ ಹೆಚ್ಚು ಸಮಯ ತೆಗೆದುಕೊಂಡರು ಮೂರನೇ ತಿಂಗಳಲ್ಲಿ ಅಥವಾ ವೀಸಾವನ್ನು ಪುನಃ ಮುಂದೂಡಿಸಿ ಕೆಲಸವನ್ನು ಹುಡುಕಬೇಕಾಗುತ್ತದೆ. 

ಇಲ್ಲಿ ಕಂಪೆನಿಗಳು ಕನಿಷ್ಠ 1 ತಿಂಗಳ ವೀಸಾ ಮಾನ್ಯತೆ ಹೊಂದಿರುವ (visa validity)  ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತವೆ.ಏಕೆಂದರೆ ಆ ಒಂದು ತಿಂಗಳಲ್ಲಿ ಕೆಲಸಕ್ಕೆ ಸೇರುವವರ (work performance) ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಈ ರೀತಿಯಾಗಿ ಮಾಡುತ್ತಾರೆ. ಕೆಲವೊಮ್ಮೆ ನಿಮ್ಮ ವೀಸಾ ವ್ಯಾಲಿಡಿಟಿ  10 ಅಥವಾ 20 ದಿನಗಳು ಉಳಿದಿದ್ದರೆ, ಕೆಲವು ಕಂಪನಿಗಳು ವೀಸಾವನ್ನುವ್ಯಾಲಿಡಿಟಿ  ವಿಸ್ತರಿಸಲು ಹೇಳುತ್ತವೆ. 

15 ದಿನಗಳಲ್ಲಿ ಅಥವಾ ಒಂದು ತಿಂಗಳಲ್ಲಿ ಕೆಲಸ ಕಂಡುಕೊಂಡ ಇತರ ನಿಮ್ಮ ಸ್ನೇಹಿತರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರ ಅನುಭವವು ವಿಭಿನ್ನವಾಗಿ ಇರುತ್ತದೆ ಕೆಲವರಿಗೆ ಹದಿನೈದು ದಿನಗಳಲ್ಲಿಯೇ ಕೆಲಸ  ಸಿಗಬಹುದು.ಕೆಲವರಿಗೆ ಮೂರು ತಿಂಗಳಾದರೂ ಹತ್ತು ಇಂಟರ್ವ್ಯೂಗೆ ಹೋದರು ಕೆಲಸ ಸಿಗಲು ಕಷ್ಟವಿದೆ ಹಾಗಾಗಿ ನೀವು ದುಬೈಗೆ ಬರಲು ಯೋಚಿಸುತ್ತಿದ್ದರೆ, ಎಚ್ಚರಿಕೆಯಿಂದ ಯೋಚಿಸಿ.

ನೆನಪಿಡಿ,  ನೀವು ಒಬ್ಬರೇ  ಹೆಚ್ಚು ತಿಳಿದವರಾಗಿಯೂ ಅಥವಾ ಕಡಿಮೆ ಅರ್ಹವಾದ  ವ್ಯಕ್ತಿ ಅಲ್ಲ. ದುಬೈ ಸರಿಸುಮಾರು ಒಂದು ದಿನಕ್ಕೆ  1,100 ವಿಮಾನಗಳನ್ನು ನಿರ್ವಹಿಸುತ್ತದೆ.  ಪ್ರವಾಸಿಗರಾಗಿ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯು ಇಲ್ಲಿನ ಕೆಲಸ ಮತ್ತು ಜೀವನಶೈಲಿಯನ್ನು ಮೆಚ್ಚುತ್ತಾರೆ . ಅವರು ಕೂಡ ಇಲ್ಲಿ ಇಂಟರ್ವ್ಯೂ ನೀಡಿ  ಉದ್ಯೋಗ ಸಿಗಬೇಕೆಂದು ಬಯಸುವವರು ತುಂಬಾ ಮಂದಿ ಇರುತ್ತಾರೆ 

ಉದ್ಯೋಗಾವಕಾಶಗಳ ವಿಷಯಕ್ಕೆ ಬಂದಾಗ, ಅಭ್ಯರ್ಥಿಗಳಿಗೆ  ಉದ್ಯೋಗಗಳು ಪ್ರತ್ಯೇಕವಾಗಿ  ಪ್ರಾದೇಶಿಕರಿಗೆ, ಕೆಲವು ನಿರ್ದಿಷ್ಟ  ರಾಷ್ಟ್ರದವರಿಗೆ ಮತ್ತು ಕೆಲವು ಭಾಷೆಗಳನ್ನೂ ಸರಗವಾಗಿ ಮಾತನಾಡಲು ಬರೆಯಲು ಬಲ್ಲವರಿಗೆ ಇಲ್ಲಿ ಕೆಲಸದ ಪ್ರಾಧಾನ್ಯತೆಯನ್ನು ಕೊಡುತ್ತಾರೆ.  ಇದು ತಾರತಮ್ಯವಲ್ಲ, ಬದಲಿಗೆ ಕಂಪನಿಗಳು ತಮ್ಮ ನಿರ್ದಿಷ್ಟ ಅಗತ್ಯಗಳಿಗಾಗಿ ಸರಿಯಾದ ಪ್ರತಿಭೆಯನ್ನು ಹುಡುಕುವ ಮಾರ್ಗವಾಗಿದೆ. ಹಾಗಾಗಿ ಇದು ಗಮದಲ್ಲಿ ಇಟ್ಟುಕೊಳ್ಳಬೇಕಾದ ಬಹು ಮುಖ್ಯ ಅಂಶ. 

ನೀವು ಮಾಡುತ್ತಿರುವ ಕೆಲಸವೂ ಅತೃಪ್ತಿಕರವಾಗಿದ್ದರೆ, (ಇಷ್ಟವಿಲ್ಲದೆ ಕೆಲಸವನ್ನು ಮಾಡಬೇಕಾದ ಪರಿಸ್ಥಿತಿ ಇದ್ದರೂ, ನೀವು ಕೆಲಸ ಮಾಡುವುದನ್ನು ಮುಂದುವರಿಸಿ, ಜೊತೆಜೊತೆಗೆ ಬಿಡುವಿದ್ದಾಗ  ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಿ (ನಿಮ್ಮ ವರ್ಕ್ ಎಕ್ಸ್ಪೆರಿನ್ಸ್ ಪ್ರಕಾರ, ಅಥವಾ ನೀವು ಬಹಳ ಆಸಕ್ತಿಯಿಂದ ಕೆಲವು (job skills) ಗಳನ್ನು ಕಲಿಯಲು ಇಚ್ಛಿಸಿದರೆ ಅವುಗಳನ್ನು ಅಭಿವೃದ್ಧಿ ಮಾಡಿ ನಿಮ್ಮ(resume) ನಲ್ಲಿ ಅಳವಡಿಸಿ)  ಮತ್ತು ಇತರ ಅವಕಾಶಗಳಿಗಾಗಿ ಸಕ್ರಿಯವಾಗಿ ಹುಡುಕುತ್ತಿರುವಾಗ ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡಿ. 

ನಿಮಗೆ ತೃಪ್ತಿದಾಯವಾದ  ಮತ್ತು ಶಾಂತಿಯ ವಾತಾವರಣವಿರುವ ಕೆಲಸವನ್ನು ನೀವು ಕಂಡುಕೊಳ್ಳುವವರೆಗೆ ನಿರಂತರವಾಗಿ ಮತ್ತು ರಚನಾತ್ಮಕವಾಗಿ ಪ್ರಯತ್ನಿಸುತ್ತಿರಿ. 

ನನ್ನ ಪ್ರಯತ್ನ ಇಷ್ಟೇ ಎಂದು ನಿಮ್ಮನ್ನು ಆಕಾಂಕ್ಷೆಯನ್ನು ಮಿತಗೊಳಿಸಿ ನಿಮ್ಮ ಧೈರ್ಯವನ್ನು ಕುಗ್ಗಿಸಿ ಕೊರೆಯಬೇಡಿ. ಬದಲಾಗಿ ನಿಮ್ಮಿಂದ ಇದನ್ನು ಮಾಡಲು ಸಾಧ್ಯವಿದೆಯೆಂಬ ಪಟ್ಟಿನಿಂದ ಶತಪ್ರಯತ್ನವನ್ನು ನೀಡಲು ಸಿದ್ಧರಾಗಿರಿ. ಸಂಕಲ್ಪ ಮತ್ತು ಪರಿಶ್ರಮದಿಂದ, ಮಾಡುವ ನಿಮ್ಮ  ಹಲವಾರು ಪ್ರಯತ್ನಗಳಲ್ಲಿ, ಒಂದು ಬಾಗಿಲು ಅಂತಿಮವಾಗಿ ತೆರೆದು ನಿಮ್ಮನ್ನು ಸ್ವಾಗತಿಸುತ್ತದೆ.  ಅದು ನಿಮ್ಮ ಜಯಕ್ಕೆ ಮತ್ತು ಅನೇಕ ಸ್ವಾಗತಾರ್ಹ ಅವಕಾಶಕ್ಕೆ ಬಾಗಿಲು ತೆರೆಯುತ್ತದೆ.

ನಾನು ಅಷ್ಟೇ  ಹಲವಾರು ಪ್ರಯತ್ನಗಳ ನಂತರ, ನಾನು ಅಂತಿಮವಾಗಿ ಐರ್ಲೆಂಡ್ ಮೂಲದ ಕಂಪನಿಯಲ್ಲಿ ಒಂದು ಒಳ್ಳೆಯ ಮಾದರಿಯ ವೃತ್ತಿ ಜೀವನವನ್ನು ಕಂಡುಕೊಂಡಿದ್ದೇನೆ.  ದಾರಿಯುದ್ದಕ್ಕೂ, ನಾನು ಲೆಕ್ಕವಿಲ್ಲದಷ್ಟು ಸಂದರ್ಶನಗಳನ್ನು ( ಇಂಟರ್ವ್ಯೂ ) ಎದುರಿಸಿದ್ದೇನೆ.  ಬಹಳಷ್ಟು  ನಿರಾಕರಣೆಗಳನ್ನು ( ರೆಜೆಕ್ಷನ್ಸ್, rejection) ಅನುಭವಿಸಿದ್ದೇನೆ  ಮತ್ತು ಎಷ್ಟೋ ಸಲ ನನ್ನ ಪ್ರಯತ್ನಗಳಲ್ಲಿ ಸೋತಾಗ  ಭಾರತಕ್ಕೆ ಹಿಂದಿರುಗುವ ಬಗ್ಗೆ ಯೋಚಿಸಿದ್ದೇನೆ ಅಷ್ಟೇ ಅಲ್ಲದೇ ಇನ್ನೂ  ಹಲವಾರು ಅಡೆತಡೆಗಳನ್ನು ಎದುರಿಸಿದ್ದೇನೆ. ಹೀಗಲೂ ಕೆಲವೊಂದು ವೈಯಕ್ತಿಕ, ಹಣಕಾಸಿನ ವಿಚಾರವಾಗಿ ಸ್ವಲ್ಪ ಅಡೆತಡೆಗಳಿವೆ. ಎಷ್ಟೆಂದರೂ ನಾವು ಮಾನವರು ದೇವರು ನಮಗೆ ಯಾವುದನ್ನು ಸಂಪೂರ್ಣವಾಗಿ ಕೊಡಲಾರನು ಆದರೆ, ನನ್ನ ಆಕಾಂಕ್ಷೆಗಳನ್ನು ನಾನು ಎಂದಿಗೂ ಬಿಡುವುದಿಲ್ಲ. ನನ್ನ  ನಿರಂತರ ಪ್ರಯತ್ನ, ಪರಿಶ್ರಮ, ಮತ್ತು ಸಾಧಿಸಬೇಕೆಂಬ ಹಠ ನನ್ನಲ್ಲಿ ಉಳಿದು ಇನ್ನೂ ಹೆಚ್ಚಾಗಿ ಗುರಿಮುಟ್ಟುವ ಆಸೆಯಕಡೆ ನನ್ನನ್ನು ಕೊಂಡೊಯ್ಯುತ್ತಿದೆ. 

ಈ ಪ್ರಕ್ರಿಯೆಯ ಮೂಲಕ, ನಾನು ಕೆಲವು ಅಮೂಲ್ಯವಾದ ಪಾಠಗಳನ್ನು ಕಲಿತಿದ್ದೇನೆ. ಮೊದಲಿಗೆ, ಬೆಂಬಲ ಮತ್ತು ಸಂಪರ್ಕಗಳಿಗಾಗಿ ( support and connections) ನಿಮ್ಮ ನೆಟ್‌ವರ್ಕ್ ಅನ್ನು (ಯಾವುದೇ ಗೆಳೆಯರ, ಉದ್ಯೋಗಿಗಳ ಹಾಗು ಸಹಮಿತ್ರರ contacts) ಗಳೊಂದಿಗೆ ಮಾತನಾಡಲು ಎಂದಿಗೂ ಹಿಂಜರಿಯಬೇಡಿ. ನೆಟ್‌ವರ್ಕಿಂಗ್ (ಅಂದರೆ contact people) ಅನಿರೀಕ್ಷಿತ ಅವಕಾಶಗಳಿಗೆ ಬಾಗಿಲು ತೆರೆಯಬಹುದು. 

ಎರಡನೆಯದಾಗಿ, ನಿರಂತರವಾಗಿ ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಿ ಏಕೆಂದರೆ ತಾಜಾ ದೃಷ್ಟಿಕೋನಗಳು (fresh perspectives)  ಮತ್ತು ನವೀನ ಆಲೋಚನೆಗಳನ್ನು ತರಬಲ್ಲ ಸ್ಮಾರ್ಟ್ ವ್ಯಕ್ತಿಗಳನ್ನು ಜಗತ್ತು ಗೌರವಿಸುತ್ತದೆ. ಜೀವಮಾನವಿಡೀ ಕಲಿಯುವವರಾಗಿರಲು ಶ್ರಮಿಸಿ.

ಇದಲ್ಲದೆ, ವೃತ್ತಿಪರ ನೆಟ್‌ವರ್ಕಿಂಗ್‌ಗೆ ಲಿಂಕ್ಡ್‌ಇನ್ ( linkedIn.com ) ಅಮೂಲ್ಯವಾದ ವೇದಿಕೆಯಾಗಿದೆ. ನಾನು ನನ್ನ ಕ್ಷೇತ್ರದ ವೃತ್ತಿಪರರೊಂದಿಗೆ ಸಂಪರ್ಕ ಹೊಂದಿದ್ದೇನೆ, ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಒಳನೋಟವುಳ್ಳ ವಿಷಯವನ್ನು ಹಂಚಿಕೊಂಡಿದ್ದೇನೆ. ಈ ಕ್ರಮಗಳು ನನ್ನ ವೃತ್ತಿಪರ ನೆಟ್‌ವರ್ಕ್ ಅನ್ನು ವಿಸ್ತರಿಸಲು ಸಹಾಯ ಮಾಡಿತು ಮತ್ತು ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆಯಿತು.

ಕೊನೆಯದಾಗಿ ನಾನು ಹೇಳಲು ಇಚ್ಚಿಸುವುದೇನೆಂದರೆ, ದೃಢನಿಶ್ಚಯದಿಂದಿರಲು ಮತ್ತು ನಿಮ್ಮ ಕನಸುಗಳನ್ನು ಎಂದಿಗೂ ಕಳೆದುಕೊಳ್ಳದಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಜೀವನದ ಗಾಡಿ  ಮುಂದಕ್ಕೆ ತಳ್ಳುತ್ತಿರಿ, ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ಕೌಶಲ್ಯಗಳನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಿ. ಪರಿಶ್ರಮ ಮತ್ತು ಪೂರ್ವಭಾವಿ ವಿಧಾನದಿಂದ, ನೀವು ನಿಮ್ಮನ್ನು ಉನ್ನತೀಕರಿಸಬಹುದು ಮತ್ತು ನಿಮ್ಮ ಎಲ್ಲಾ ಆಕಾಂಕ್ಷೆಗಳನ್ನು ಸಾಧಿಸಬಹುದು.

ನಿಮ್ಮ ಪ್ರಯಾಣದಲ್ಲಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ!

Leave feedback about this

  • Quality
  • Price
  • Service
Choose Image