ಪರಿಚಯ ಪತ್ರ

ಎಲ್ಲರಿಗೂ ನನ್ನ ನಮನಗಳು,

ನಾನು ರೋಶ್ನಿ. ನಾನು ಹುಟ್ಟಿ ಬೆಳೆದದ್ದು ನನ್ನಜ್ಜಿಯ ಊರು ಸಕಲೇಶಪುರದಲ್ಲಿ ನಂತರ ಪ್ರೌಢಶಾಲೆ , ಪದವಿ  ವ್ಯಾಸಂಗ ಮಾಡಿದ್ದು ಮಂಗಳೂರಿನಲ್ಲಿ. 

ಈಗ ದುಬೈನಲ್ಲಿ ವಾಸಿಸುತ್ತಿದ್ದೇನೆ. ಬಾಲ್ಯದಿಂದಲೂ ನನಗೆ ಪುಸ್ತಕಗಳೆಂದರೆ ಇಷ್ಟ . ಅದರಲ್ಲೂ ಕನ್ನಡ ಪುಸ್ತಕಗಳನ್ನೂ ಓದುವುದೆಂದರೆ ಬಹಳ ಇಷ್ಟ. 

ನಾನು ಮೂರನೇ ತರಗತಿಯಲ್ಲಿದ್ದಾಗ ಪಪ್ಪಾ ನನಗೆ ಬಾಲಮಂಗಳ, ತುಂತುರು ಪುಸ್ತಕಗಳನ್ನು ತಂದುಕೊಟ್ಟು ನನಗೆ ಓದುವ ಹವ್ಯಾಸವನ್ನು ಮಾಡಿಸಿದರು. 

ಕಾಲೇಜಿಗೆ ಕಾಲಿಟ್ಟನಂತರ ನಾನು ಮಾಸಿಕ ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ ಕಾದಂಬರಿಗಳನ್ನು ಓದಲಾರಂಭಿಸಿದೆ.

ನಾನು ಹಲವಾರು ಕಾದಂಬರಿಗಳನ್ನು ಓದಿದ್ದೇನೆ ಆದರೆ ನನಗೆ ಅತೀ ಹೆಚ್ಚು ಮಗ್ನಳಾಗಿ ನನ್ನಷ್ಟಕ್ಕೆ ನಾನು ನಗುತ್ತ ನನ್ನದೇ ಆದ ಕಲ್ಪನೆಲೋಕದಲ್ಲಿ ಮಲೆನಾಡನ್ನು ವಿನೋದಿಸುತಿದ್ದ ಲೇಖಕನ ಕೃತಿಗಳೆಂದರೆ ಅದು ಪೂರ್ಣಚಂದ್ರ ತೇಜಸ್ವಿ ಅವರದ್ದು. 

ಅವರ ಕೃತಿಗಳನ್ನು ಓದುತ್ತಲೇ ನನ್ನಲ್ಲಿ ಬರವಣಿಗೆಯ ಹವ್ಯಾಸ ಹುಟ್ಟುಕೊಂಡಿತ್ತು. ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ  ನನ್ನ ಬಿಡುವಿನ ಸಮಯದಲ್ಲಿ ಹಾಳೆಯ ಮೇಲೆ ಸಣ್ಣ  ಕತೆಗಳನ್ನು ಬರೆಯುತ್ತಿದ್ದೆ ಅದು ಎಷ್ಟೇ ಏಕಾಗ್ರತೆ, ಶ್ರದ್ಧೆಯಿಂದ ಬರೆದರೂ ಮೂರನೇ ದಿನಕ್ಕೆ ಸೋಮಾರಿತನದಿಂದ ಬರೆಯುವುದನ್ನು ಬಿಟ್ಟುಬಿಡುತ್ತಿದ್ದೆ. 

ಈಗ ಪುನಃ ಅವುಗಳನ್ನು ಹೊಸ ಶೈಲಿಯಲ್ಲಿ, ಸ್ವಚ್ಛವಾಗಿ ಬರೆದು ಬಿತ್ತರಿಸಬೇಕು  ಎಂದು ಆಶಿಸಿದ್ದಾಗ ನನಗೆ ಹೊಳೆದದ್ದು  “ಬ್ಲಾಗ್” ಮಾಡುವುದೆಂದು ಹಾಗಾಗಿ ನಾನು ನನ್ನ ಜೀವನದ ಅನ್ವೇಷಣೆಗಳನ್ನು, ಅನಿಸಿಕೆಗಳನ್ನು ಹಾಗು ನಾನು ಕಂಡ ಕೆಲವು ಪ್ರಸಂಗಗಳನ್ನು ನಿಮ್ಮೆಲ್ಲರೊಂದಿಗೆ ಹಂಚುವುದಕ್ಕಾಗಿ ಈ ಬ್ಲಾಗ್ ಅನ್ನು ಸಿದ್ಧಪಡಿಸಿದ್ದೇನೆ. 

ನಿಮ್ಮೆಲ್ಲರನ್ನು ನಾನು ಮನರಂಜಿಸಬಲ್ಲೆ ಎಂದು ಭಾವಿಸುತ್ತೇನೆ. ಇದು ನನ್ನ ಮುನ್ನುಡಿ ಕನ್ನಡದಲ್ಲಿ ಅಚ್ಚುಕಟ್ಟಾಗಿ ಬರೆಯಬೇಕೆಂಬುವುದು ನನ್ನ ಆಸೆ ಹಾಗು ನನ್ನ ಪ್ರತಿಷ್ಠೆಯೂ ಕೂಡ, ತಪ್ಪಿದ್ದಲ್ಲಿ ಕ್ಷಮಿಸಿ ನಾನು ತಿದ್ದಿಕೊಳ್ಳುತ್ತೇನೆ ಹಾಗೆ ಇನ್ನೂ ಹಲವು ಕತೆಗಳನ್ನೂ ಬರೆಯಲು ನನ್ನನ್ನು ಉತ್ತೇಜಿಸಿ ಎಂದು ವಿನಂತಿಸುತ್ತೇನೆ 



ಧನ್ಯವಾದಗಳು

Sign up to Newsletter

Enter your email and we'll keep you posted with news and updates!

Subscription Form 2