Sirilannana Shikariya sahasagalu
ಗದ್ಯಂ ಹೃದ್ಯಂ

ಸಿರಿಲಣ್ಣನ ಶಿಕಾರಿ ಸಾಹಸಗಳು

ಶಾಲೆಗೆ ಹೋಗಿ ಶಿಕ್ಷಕರ ಬಳಿ ಮಾತನಾಡಿ ಬಂದ ಇನ್ಸ್ಪೆಕ್ಟರ್ ಸೈಮನ್ ಕೀರ್ತಿ,  ಕಾನ್ಸ್ಟೇಬಲ್ ಹತ್ತಿರ ಬಂದು, ಏನ್ರಿ ಬೆಳಗ್ ಬೆಳಗೆ ತಲೆ ಕೆರ್ಕೊಂಡು ಕೂತಿದೀರಾ ಏನ್ ಕತೆ?

ಇಲ್ಲ ಸಾರ್…. 

ಕಾಫಿ ಬೋರ್ಡಿಂದು ಒಂದು ಕೇಸ್ ಬಂದಿದೆ ನೋಡ್ತಿರಾ? ನಾನೇ ಹ್ಯಾಂಡಲ್ ಮಾಡೋಣ ಅಂತ ಇದ್ದೆ ಆದ್ರೆ ಈ ಚಿಲ್ಟಾರಿ ನನ್ಮಕ್ಕಿಳಿಗೆ ನೀವೇ ಸರಿ. 

ಸರಿ ಕಳಿಸಿ  ಒಳಗೆ. 

ಓ ಇವನೇನಾ ಏನೋ ವಯಸ್ಸು ನಿಂದು?

ಹದಿನೇಳು ಸರ್ ( ನಡಗುತ್ತಲೆ )

ಸ್ಕೂಲಿಗೆ ಹೋಗತಿಯೋ ಹೆಂಗೆ?

ಇಲ್ಲ ಸರ್ 

ಹಾ೦… 

ಅಂದ್ರೆ ನಾನು ಐ.ಟಿ. ಐ ಓದುತ್ತಾ ಇದ್ದೀನಿ ಸರ್

ಏನಪ್ಪ ಸಬ್ಜೆಕ್ಟ್?

ಅದು.. ಅದೆಲ್ಲ ಗೊತ್ತಿಲ್ಲ ಸರ್…  ಸ್ಕೂಲಲ್ಲಿ ಏನೇ ಹೇಳಿ ಕೊಟ್ರು ಮನೇಲಿ ಬಂದು ಓದುಕೊಳ್ತಿನಿ ಸರ್ 10th ಅಲ್ಲಿ ನಾನು 526 ಮಾರ್ಕ್ಸ್ ತೊಗೊಂಡಿದಿನಿ

ಹೋಹೊ .. ಸರಿಯಾಗ್ ಸಬ್ಜೆಕ್ಟ್ ಹೇಳೋಕ್ ಬರಲ್ಲ ಯಾವ್ ಸ್ಕೂಲಪ್ಪ ನಿಂದು? ಜೂನಿಯರ್ ಸ್ಕೂಲು 

ಹ್ಮ್.. ಬಂದೂಕು ಹಿಡ್ಕೊಂಡು ಊರುಸುತ್ತಕ್ಕೆ ಯಾವನ್ ಹೇಳ್ಕೊಟ್ಟಿದ್ದು?

ಸರ್ ಅದು ಏನ್ ಅಂದ್ರೆ… 

ಹೇಯ್…   ನಿನ್ ವಯಸ್ಸು ಹದಿನೇಳು ನೆಟ್ಟುಗೆ ಮೀಸೆ ಹುಟ್ಟಿಲ್ಲ ಏನು ಹುಲಿನ ಶಿಕಾರಿ ಮಾಡೋ ಕನಸ?

ಸರ್ ಹಂಗೇನಿಲ್ಲ ನಮ ಮಮ್ಮಿ ಟೀಚರು ಕಾನ್ವೆಂಟ್ ಅಲ್ಲಿ ನಾನು ಯಾಕೆ ಆತರ ಮಾಡ್ಲಿ ?

ಏನ್ ಹೆಸರು ನಿಂದು?

ಸುಮನ್ ಡಿಕುನ್ಹಾ 

ಡಿಕುನ್ಹಾ… ಕ್ರಿಶ್ಚಿಯನ್ ತಾನೇ ನೀನು? ಹಾ೦ ಸರ್ 

ಬೈಬಲ್ ಅಲ್ಲಿ ಎಷ್ಟು  ಪುಸ್ತಕಗಳಿವೆ ಹೇಳು ನೋಡೋಣ?

ಸರ್ ಒಂದೇ ಅಲ್ವಾ… ನಮ್ಮ್  ಮನೇಲಿ ಒಂದೇ ಇರೋದು. ಅಯ್ಯಯೋ ಅಲ್ಲ ನಾನು ನೋಡಿದೀನಿ ಕೊಂಕಣಿ ಮತ್ತೆ ಕನ್ನಡ ಎರಡು ಸರ್.

ಬೈಬಲ್ ಅಲ್ಲಿ ನೆಟ್ಟುಗೆ ಎಷ್ಟು ಪುಸ್ತಕಗಳಿದವೆ ಅಂತ ಗೊತ್ತಿಲ್ಲ ಶಿಕಾರಿ ಬೇರೆ ನಿಂದು. 

 ರೀ ಮಂಜುನಾಥ್ ಇವ್ನ್ ಪೇರೆಂಟ್ಸ್ ನ ಕರ್ಸಿ… 

 ಓ ಬರ್ಬೇಕು ಸೋಬಿನ ಮಿಸ್ ಏನು ಸ್ಕೂಲ್ ದಾರಿ ಮರತುಬಿಟ್ಟು ಬಂದ್ರಾ ?

 ನಮಸ್ತೆ ಸರ್.. 

ಹಾಂ… ನಮಸ್ತೆ ಕೂತ್ಕೊಳ್ಳಿ.. 

ನಮ್ದು ಲೈಸೆನ್ಸ್ ಇರೋ ಬಂದೂಕು ಸರ್ ನಿಮಗೆ ಗೊತ್ತಲ್ಲ ಮಟಸಾಗರ ಅಂದ್ರೆ ಸಾಕು ಸಂಜೆ ನಾಲ್ಕು ಗಂಟೆ ಮೇಲೆ ಟೌನ್‌ ಇಂದ ಒಂದು ಗಾಡಿನು ಬರಲ್ಲ ಅಂತ..

ನಮ್ ಮನೆವ್ರು  ಶಿಕಾರಿ ಮಾಡೋಕ್ಕೆ ಅಂತ ಏನೂ ಹೋಗಿಲ್ಲ ನಿಮಗೆ ಗೊತ್ತು ಆನೆ ಕಾಟ. ಏನೋ ಮನೆ ಪಕ್ಕದಲ್ಲಿ ಇರೋ ಈತ್ತಲಿಗೆ ಯಾವ್ದೂ ಕಬ್ಬೆಕ್ಕು ಹಾಗಾಗ ಬರೋದನ್ನು ನೋಡಿ ಬಂದೂಕು ತೊಗೊಂಡು ಹೋಗಿದ್ದಾರೆ.  

ಪಪ್ಪಾ ಕುಡಿದಿದ್ದಾರೆ ಅಂತ ಇವ್ನು ಅವ್ರ್ನ ಹೊರಗಡೆ ಹೋಗೋಕ್ಕೆ ಬಿಟ್ಟಿಲ್ಲ ಇವ್ನು ಅವ್ರು ಕೈಯಲ್ಲಿದ್ದ  ಬಂದೂಕು ಕಸ್ದುಕೊಂಡ, ತಂದೆಗೂ ಮಗನಿಗೂ ರೋಡ್ ಅಲ್ಲಿ ಮಾತುಕತೆ ಆಯಿತು ಅಷ್ಟೇ.. ಯಾರೋ ನೋಡಿದವ್ರು  ನಿಮ್ ಹತ್ರ ಏನೇನೋ ಹೇಳಿದ್ದಾರೆ 

ಚಿಕ್ಕಹುಡ್ಗ, ಬಿಟ್ಟುಬಿಡಿ  ಸರ್.. 

ಸರಿ… ಕರ್ಕೊಂಡು ಹೋಗಿ ಇನ್ನುಮೇಲಾದ್ರು ಇಂತ ವಸ್ತುಗಳನ್ನ ಮಕ್ಕಳ ಕೈಗೆ ಕೊಡ್ಬೇಡಿ.  ಥಾಂಕ್ಯು ಸರ್. 

ಸಿರಿಲನ್ಣ ಏನ್ ಈಕಡೆ. 

ಓಹೋ ಚಂದ್ರ  ಸುಮ್ನೆ ಬಂದೆ, ಮೊನ್ನೆ ಆನೆ ಬಂದು ಗದ್ದೆನೆಲ್ಲ ಪುಡಿಮಾಡಿ ಬಿಟ್ಟಿದೆ ಏನೋ ಈ  ಫಸಲು ಬರುತ್ತೆ ಅಂತ ಅನ್ಕೊಂಡು ಭತ್ತ ಹಾಕ್ದೆ ಎಲ್ಲ ಹಾಳ್ ಹಾಗೊಯ್ತ್. 

ಗ್ಯಾರೇಜ್ ಕಡೆ  ಕಾಣಿಸೋದೆಲ್ಲ.. 

ಅದ್ ಯಾಕ್ ಕೇಳ್ತಿಯ ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಗೆ ಗ್ಯಾರೇಜಿಗೆ ಹೋಗ್ತೀನಿಕಣಪ್ಪಾ  ಒಂದು  ಟ್ರಾಕ್ಟ್ರು ಕಾಣ್ಸಲ್ಲ.. ಏನ್ ಮಾಡೋದು?

ಈ ಕೊರೊನ ಬಂದ್ಮೇಲೆ ಗ್ಯಾರೇಜ್ಅಲ್ಲಿ ಕೆಲ್ಸಗಳೆ ಕಮ್ಮಿ ಹಾಗ್ಬಿಟ್ಟಿದೆ. 

ಕಳೆದು ವರ್ಷ ನಾನು ಇಜ್ಜಣ್ಣ ಸೇರಿ ಲಾಕ್ಡೌನ್ ಟೈಮೆಲ್ಲಿ ಒಂದೂವರೆ ಎಕರೆ ಮೆಣಸಿನಕಾಯಿ ಹಾಕಿದ್ವಿ ಅಷ್ಟೋ ಇಷ್ಟೋ ಲಾಭ ಬಂತು 

ಈ ವರ್ಷ ಏನ್ ಕತೇನೋ.. 

ಬಿಡಿ, ಶಿಕಾರಿಗೆ ಏನಾದ್ರು ಹೋಗಿದ್ರಾ ಏನ್ ಕತೆ?

ಇಲ್ಲ ಮಾರಾಯ ಊರಲ್ಲಿ ಐವತ್ತು ಆನೆಗಳು ಬಂದಿದೆ ಇದ್ರು ಮಧ್ಯೆ ಯಾವ್ ಶಿಕಾರಿ ಮಾಡೋದು.. 

ಚಂದ್ರ  ಸಣ್ಣಪ್ಪು ನೋಡ್ದ ?

ಸದಾಶಿವಾ ನ ? ಊ೦.. ಇನ್ಯಾರು ಸಣ್ಣಪ್ಪು ಅಂದ್ರೆ. 

ಬಡ್ಡಿಮಗ ಸಂಜೆ ಬಾಳೆಗದ್ದೆಗೆ ಬಾ ಅಂದಿದ್ದ.. ಹೋದ್ರೆ  ಒಂದು ಕ್ವಾಟ್ರು ಆದ್ರೂ ಸಿಗುತ್ತೆ ಅಂತ ಅಂದುಕೊಂಡಿದ್ದೆ ನೋಡ್ತಿನಿ ಅಲ್ಲಿಗೆ ಹೋಗಿ.. 

ಸಿರಿಲ್ ಸಕಲೇಶಪುರದಲ್ಲಿ ಅರ್ಧದಷ್ಟು ಜನಸಾಮಾನ್ಯರಿಗೆ ಪರಿಚಯ ಇರುವ ವ್ಯಕ್ತಿ. ಸಕಲೇಶಪುರದ ತೇಜಸ್ವಿ ಸರ್ಕಲ್ ಹತ್ತಿರ ಇಪ್ಪತ್ತು ಇಪ್ಪತೈದು ವರ್ಷಗಳಿಂದ ಅಣ್ಣ-ತಮ್ಮ ಟ್ರಾಕ್ಟಾರ್ ಗ್ಯಾರೇಜ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಸಕಲೇಶಪುರ, ಮಗ್ಗೆ ಆಲೂರು , ಹಾಳುಬಾಳು ಮೂಡಿಗೆರೆ, ಅರೇಹಳ್ಳಿ ಶುಕ್ರವಾರಸಂತೆ ವರೆಗೂ ಇರುವ ಕಾಫೀ ಎಸ್ಟೇಟ್ ಮನೆಗಳ  ಟ್ರಾಕ್ಟಾರ್ ರಿಪೇರಿ ಕೆಲಸವನ್ನು ಇಬ್ಬರು ಸೇರಿ ಮಾಡುತಿದ್ದರು. ಕಾಲ ಕ್ರಮೇಣ ಈಗ ಪಿಕಪ್ಗಳು ಎಲ್ಲ ಪಟ್ಟಣಗಳಲ್ಲಿ ಸದ್ದು ಮಾಡುತ್ತಿದ್ದಂತೆ  ಟ್ರಾಕ್ಟಾರ್ ಗಳ ಸಂಖ್ಯೆಯು ಕಡಿಮೆ ಆಗಿದೆ ಹೀಗಾಗಿಯೇ ದೊಡ್ಡವನು ಸಣ್ಣ ಉಪಾಯ ಮಾಡಿ ಗ್ಯಾರೇಜ್ ಎದುರುಗಡೆ ಒಂದು ಆಯಿಲ್ ಅಂಗಡಿಯನ್ನು ಇಟ್ಟುಕೊಂಡ . ಇಜ್ಜಣ್ಣನಿಗೆ ಆಯಿಲ್ ಅಂಗಡಿ ಇರುವುದರಿಂದಲೇ ಸ್ವಲ್ಪ ಮಂದಿ ಎಸ್ಟೇಟ್ ಸಾಹುಕಾರರು ಪರ್ಸನಲ್ ಕಾಂಟಾಕ್ಟ್ ಮಾಡಿ ತಮ್ಮ ತಮ್ಮ ಹಳ್ಳಿಗಳಿಗೆ ಕರೆಸಿಕೊಂಡು ಟ್ರಕ್ಕ್ಟಾರ್ ಮೋಟಾರ್ ರಿಪೇರಿಯನ್ನು ಮಾಡಿಸುತ್ತಾರೆ. 


ಹೀಗಾಗಲೇ ಹೇಳಿದಂತೆ ಸಿರಿಲ್ ವೃತ್ತಿಯಿಂದ ಮೆಕ್ಯಾನಿಕ್ ಪ್ರವೃತ್ತಿಯಿಂದ ಭತ್ತ, ಅಡಿಕೆ, ಮತ್ತು ಕಾಫಿ ಬೆಳೆಯುವ ಸಣ್ಣ ರೈತ. ಆದರೆ ಹವ್ಯಾಸದಿಂದ ಆತ “ಶಿಕಾರಿ ಮ್ಯಾನ್”. 

ಸಣ್ಣ ವಯಸ್ಸಿನಿಂದಲೇ ಗೆಳೆಯ ಸದಾಶಿವ (ಸಣ್ಣಪ್ಪು) ಜೊತೆ ಸೇರಿ ಹಾಕಿದ ಲಾಗ ಆರ್ಭಟಗಳು ಒಂದೆರಡಲ್ಲ. 

ಸಣ್ಣಪ್ಪು ಸಿರಿಲಾ ಒಟ್ಟಿಗೆ ಬೆಳೆದವರು, ಶಾಲೆ ಮುಖ ಎಷ್ಟು ನೋಡಿದ್ದೀರಾ ಎಂದು ಕೇಳಿದರೆ ಇಬ್ಬರ ಬಳಿಯೂ ಉತ್ತರವಿಲ್ಲ 

ಸಿರಿಲ್ ಹದಿನಾಲ್ಕನೇ ವರ್ಷದವನಿರುವಾಗ ಇಬ್ಬರು ಸೇರಿ ಗದ್ದೆಯಲ್ಲಿ ದನಗಳನ್ನು ಮೇಯಿಸಿಕೊಂಡು ಹಳ್ಳದ ಬಳಿ ಆಟವಾಡುತ್ತಾ ಇದ್ದರು. ಸಂಜೆಯಾಗುತ್ತಿದ್ದಂತೆಯೇ ಮಳೆ ಬರಲಾರಂಬಿಸಿತು ಹಾಗೆ ತುಸು ನೆನೆದ ಇಬ್ಬರು ಹಳ್ಳಕ್ಕೆ ಇಳಿಯುವ ಪ್ಲಾನ್ ಹಾಕಿಕೊಂಡರು. 

ಅಂದು ಲೈನ್ ಮ್ಯಾನ್ಗಳು ವಿದ್ಯುತ್ ತಂತಿಗಳನ್ನು ಸರಿಪಡಿಸಲೆಂದು ಗದ್ದೆಮನೆ ಭಟ್ರು ಗುಡಿ ಹತ್ತಿರ ಕೆಲಸ ಮಾಡುತಿದ್ದರು. 

ವಿದ್ಯುತ್ ಚಾಲು ಇದ್ದ ತಂತಿ ಒಂದು ಗದ್ದೆಯ  ಹಳ್ಳಕ್ಕೆ ತುಂಡಾಗಿ ಬಿದ್ದಿತ್ತು. ಇದನ್ನರಿಯದ ಇಬ್ಬರು ಖುಷಿಯಿಂದ  ಹಳ್ಳಕ್ಕಿಳಿದರು  

ಅಷ್ಟೇ ತಡ ಎಂತದೋ ಒಂದು ಗಾತ್ರದ ಶಕ್ತಿ ರಯ್ಯನೇ ಬಡಿದು ಬಾಲಕ ಸಿರೀಲನ್ನು ನೆಲಕ್ಕಪ್ಪಳಿಸಿತು ಆತನ ಕೈ ಹಿಡಿದುಕೊಂಡಿದ್ದ ಸಣ್ಣಪ್ಪು ದಡದ  ಮರಳಿನ ಮೇಲೆ ಬಿದ್ದ. 

ಮಕ್ಕಳು ಕಾಣಿಸುತಿಲ್ಲವಲ್ಲ ಎಂದು ಕಳವಳದಿಂದ ದೇವಪ್ಪಣ್ಣ (ಸಣ್ಣಪ್ಪು ತಂದೆ ) ಗದ್ದೆ ಬೈಲಲ್ಲಿ ಹುಡಿಕಿಕೊಂಡು ಬರುವಾಗ,

ಹಳ್ಳದ ಬಳಿ ಮಕ್ಕಳ ಅವಸ್ಥೆ ಕಂಡು ದೂರದಲ್ಲಿ ಕೆಲಸ ಮಾಡುತಿದ್ದ ಲೈನ್ ಮ್ಯಾನ್ಗಳಿಗೆ  ಕೂ ಕೊಟ್ಟರು. 

ಒಡನೆಯೇ ವಿದ್ಯುತ್ ಸಂಚಾರವಿದ್ದ ಪ್ರತ್ಯೇಕ ಲೈನನ್ನು ಕಡಿತಗೊಳಿಸಿ ಮಕ್ಕಳನ್ನು ಮೇಲೆತ್ತಿಕೊಂಡು ದೇವಪ್ಪಣ್ಣ ವಲ್ಲಿ ಪರ್ಭುಗಳ ಮನೆಕಡೆ ಹೊರಟರು. 

ಲಿಲ್ಲಿ ಬಾಯಮ್ಮ ಮತ್ತು ವಲ್ಲಿ ಪರ್ಭುಗಳು ಕುಶಾಲಪ್ಪರವರ ಕಾಫಿ ತೋಟದಲ್ಲಿ ಕೆಲಸ ಮಾಡುತಿದ್ದರು. ಮಕ್ಕಳಿಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದು ತಿಳಿದ ತಕ್ಷಣ ಕುಶಾಲಪ್ಪರವರ ಜೀಪಿನಲ್ಲಿ ಹಾಕಿ ದೊಡ್ಡಾಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿದ್ದರು. 

ಸಣ್ಣಪ್ಪುಗೆ ಅಷ್ಟೊಂದು ಏನು ಅಸ್ವಸ್ಥನಾಗಿರಲಿಲ್ಲಅವನು ಮೂರೆ ವಾರಗಳಲ್ಲಿ ಹುಷಾರದ. ಆದರೆ ಸಿರಿಲಿನ ಕತೆ ಬೇರೆಯದೆ ಆಗಿತ್ತು. 

ಲಿಲ್ಲಿ ಬಾಯಮ್ಮನವರು ಬೆಳಿಗ್ಗೆ ಐದು ಗಂಟೆಗೆ ಎದ್ದು ೬ ಕಿಲೋಮೀಟರ್ ಕಾಡುದಾರಿಯಲ್ಲಿ ನಡೆದು ಆಸ್ಪತ್ರೆಗೆ ಹೋಗಿ ಮಗನ ಅರೋಗ್ಯ ವಿಚಾರಿಸಿಕೊಂಡು ಕಾಪಿ-ತಿಂಡಿ ಕೊಟ್ಟು ಬಂದು ಮತ್ತೆ ಎಂಟು ಗಂಟೆಗೆ ತೋಟದ ಕೆಲಸಕ್ಕೆ ಹೋಗುತಿದ್ದರು. ಹೀಗೆ ಲಿಲ್ಲಿಬಾಯಮ್ಮ ಸರಿ ಸುಮಾರು ಆರು ತಿಂಗಳುಗಳ ಕಾಲ ಆಸ್ಪತ್ರೆ ಓಡಾಟ ನಡೆಸಿ ಸಿರಿಲನನ್ನು ಗುಣಪಡಿಸಿದರು.


ಹೀಗೆ ಹದಿನೆಂಟು ಇಪ್ಪತ್ತು ವರ್ಷಗಳಾಗುತ್ತಿದ್ದಂತೆಯೇ  ತಂದೆ ವಲ್ಲಿಪರ್ಭು ಅವರು ಎಲ್ಲಿಯೋ ಸಾಲ ಮಾಡಿ ಅವರಿವರ ಬಳಿ ವಿಚಾರಿಸಿ ಇಜ್ಜಣ್ಣ ಮತ್ತು ಸಿರಿಲನಿಗೆ ಟ್ರಾಕ್ಕ್ಟಾರ್ ಮೆಕಾನಿಕ್ ಕೆಲಸವನ್ನು ಕಲಿಸಿದರು. ಸಕಲೇಶಪುರ ಪೇಟೆಯಲ್ಲಿ ಮಾರ್ಡನ್  ದಿನಸಿ ಅಂಗಡಿಗಳು, ಶಾಲೆಗಳು, ಬಟ್ಟೆ ಅಂಗಡಿಗಳು, ಸೈಕಲ್ ಶಾಪು , ಗ್ಯಾರೇಜು ಹಾಗು ಇನ್ನಿತರ ಅಂಗಡಿಗಳು  ಆಗತಾನೆ ಹುಟ್ಟಿಕೊಳ್ಳುತ್ತಿದ್ದವು. ಸಿರಿಲನಿಗೆ ನಿತ್ಯವೂ ಪೇಟೆಗೆ ಹೋಗುವ ಅನಿವಾರ್ಯವಿತ್ತು

ಹೀಗೆ ಸಣ್ಣಪ್ಪು ಮತ್ತು ಸಿರಿಲ್ ಬೇರೆ  ಹುಡುಗರ ಹಾಗು ನಡುವಯಸ್ಕ ಗಂಡಸರ ಜೊತೆ ಒಡನಾಟ ಬೆಳೆಯಿತು. 

ಹಾಗೆ ಕೊಳ್ಳಹಳ್ಳಿಯ ಶಂಕರನ ಫ್ರೆಂಡ್ಶಿಪ್ ಮಾಡಿಕೊಂಡರು. ಕೊಳ್ಳಹಳ್ಳಿ ಶಂಕರ ತನ್ನ ಶಿಕಾರಿ ಹಾಬಿಗೆ ಊರವರ ನಡುವೆ ಪಾಪ್ಯುಲರ್ ಆಗಿದ್ದ. ಕೊಳ್ಳಹಳ್ಳಿಯ ಶಂಕರನ ಹತ್ತಿರ ಒಂದು ಲೈಸೆನ್ಸ್  ಬಂದೂಕು ಇತ್ತು. ತಂದೆ ವಲ್ಲಿ ಪ್ರಭುಗಳಿಗೂ ಕೊಳ್ಳಹಳ್ಳಿಯಲ್ಲಿ ಬಹಳ ಮಂದಿಯ ಪರಿಚಯ, ಒಡನಾಟವಿತ್ತು.   ವಲ್ಲಿ ಪರ್ಭುಗಳು ಆರಂಭದಲ್ಲಿ ಗುಂಪು ಕಟ್ಟಿಕೊಂಡು ಇತರರೊಂದಿಗೆ ಸೇರಿ ಶಿಕಾರಿಗೆ ಹೋಗುತ್ತಿದ್ದರು ತಂದೆಯೊಂದಿಗೆ ಈತನು  ಶಿಕಾರಿ ಹುಚ್ಚು ಬೆಳಿಸಿಕೊಂಡು ರಾತ್ರಿಯೆಲ್ಲ ಕಾಡು, ತೋಟ, ಬಯಲು ಸುತ್ತಿಕೊಂಡು, ಕಬ್ಬೆಕ್ಕು, ಮೊಲ, ಕಾಡುಕೋಳಿ ಹಂದಿಯನ್ನು ಬೇಟೆಯಾಡ ತೊಡಗಿದರು. 

ಮೊದ  ಮೊದಲು ಶಂಕರನ ಜೊತೆ ಹೋಗುತ್ತಿದ್ದವನು, ನಂತರದ ದಿನಗಳಲ್ಲಿ ಹಲಸುಲಿಗೆಯ ಟಿ.ವಿ ರಿಪೈರೆರ್ ಕುಮಾರ ಮತು ಅವನ ಸಂಗಡಿಗರ ಜೊತೆ ದೊಡ್ಡ ಪ್ರಾಣಿ  ಅಥವಾ  ಹಂದಿಯನ್ನು  ಶಿಕಾರಿ ಮಾಡುವ ಕನಸನ್ನು ನನಸು ಮಾಡಲು ಕತ್ತಲಾದಂತೆಯೇ ಬಂದೂಕು, ಹೆಡ್ ಲ್ಯಾಂಪ್, ಕೈಯ್ಯಲ್ಲಿ ಕತ್ತಿ, ಜರ್ಕಿನ್ ಹಾಕಿಕೊಂಡು  ಒಂದು ಪ್ಯಾಕೆಟ್ ಬೀಡಿ ಜೋಬಿನಲ್ಲಿರಿಸಿ ಬೂಟ್ಸ್ ಹಾಕಿಕೊಂಡು ಹೋಗುತ್ತಿದ್ದರು. 


ಮದುವೆಯ ನಂತರವೂ ಈ ಹವ್ಯಾಸ  ನಡೆಯುತ್ತಲೇ ಇತ್ತು.  

ನಮ್ಮಕಡೆ  ಮೆಣಸು ಹಾಕುವುದಂದ್ರೆ ಈಗಾಗಲೇ ತೋಟದಲ್ಲಿ ಹಾಕಿದ ಕಾಳು  ಮೆಣಸಿನ ಗಿಡ ಅಂದರೆ ಬಳ್ಳಿಗಳ್ಳನ್ನು ಲೆಕ್ಕ ಮಾಡಿ ಅದರಲ್ಲಿ ಈ ವರ್ಷದ ಫಸಲಲ್ಲಿ ಎಷ್ಟು ಆದಾಯ ಬರಬಹುದು ಎಂದು ಅಂದಾಜು ಮಾಡಿ ಪಾರ್ಟ್ನೆರ್ರ್ಶಿಪ್ ಅಲ್ಲಿ ಮೆಣಸನ್ನು ಹಾಕುವುದು. 

ಮೆಣಸು ಕೊಯ್ದ ಕಡೆದಿನ ಎಲ್ಲಾ ಕೆಲ್ಸದವರನ್ನು ಕರೆದು ಊಟಕ್ಕೆ ಕರೆದು ಗಮ್ಮತ್ ಮಾಡುವುದು ಮಲೆನಾಡಿನವರ ವಾಡಿಕೆ. 

ಹೀಗೆ ಒಮ್ಮೆ ಟ್ರ್ಯಾಕ್ಟರ್ ಜಾನ್, ಇಜ್ಜಣ್ಣ ಹಾಗು ಸಿರಿಲ್ ಮೂವರು ಸೇರಿ ನಂಜಿನಕಲ್ಲು ಹತ್ತಿರ ಮೆಣಸು ಹಾಕಿದ್ದರು. 

ಕಡೆದಿನದ ಹಿಂದಿನ ರಾತ್ರಿ ಸಿರಿಲಾನಿಗೆ ಶಿಕಾರಿಯಲ್ಲಿ ಕಾಡು ಹಂದಿ ಸಿಕ್ಕಿತ್ತು ಹೇಗೋ ಒಳ್ಳೆಯ ವಿಷಯವೆಂಬಂತೆ ಮರುದಿನ ಅಡುಗೆ ಮಾಡಿ ಕೆಲ್ಸದವರಿಗೆ ಊಟ ಹಾಕಿದ್ದರು. 

ರಾತ್ರಿ ಕೊಯ್ದ ಮೆಣಸನ್ನು ಪಾರೆ ಕಾಯಲು ಸಿರಿಲಾ ಹಾಗು ಇಜ್ಜಣ್ಣ ಇಬ್ಬರು ಹೊರಡುತ್ತಿದ್ದಂತೆ ಮನೆಯ ಹೆಂಗಸರ ಗೋಳು ತಾವು ಕೂಡ ಮೆಣಸಿನ ತೋಟದ ಗುಡಿಸಲಿಗೆ ಬರುವುದಾಗಿ ಹಠ ಮಾಡಿದರು. 

ಸರಿಯೆಂಬಂತೆ ತಟ್ಟೆ ಲೋಟ ಅನ್ನ ನೀರು ಹಾಗು ಹಂದಿಮಾಂಸದ ಗಸಿಯನ್ನು ಬುಟ್ಟಿಯಲ್ಲಿರಿಸಿ ಗುಡಿಸಿಲಿನಲ್ಲಿ ಹೋಗಿ ಚೌಕಾಬಾರ ಆಟಾಡಿಕೊಂಡು ಅಲ್ಲೆ ಊಟಮಾಡುವ ಪ್ಲಾನ್ ಮಾಡಿ ಕಾರಿನಲ್ಲಿ ಹೊರಟರು. 

ಹೆಂಗಸರನ್ನು ಗುಡಿಸಲಿನ ಹತ್ತಿರ ಬಿಟ್ಟು ತಾವು ಬಾರಿಗೆ ಹೋಗಿ ಸ್ವಲ್ಪ ರಮ್ ವಿಸ್ಕಿ ತರುವುದಾಗಿ ಹೇಳಿ ಸಿರಿಲ್ ಮತ್ತು ಇಜ್ಜಣ್ಣ ಟೌನಿಗೆ ಹೋದರು. 

ಗುಡಿಸಿಲಿನಲ್ಲಿ ಸೋಬಿನಾ, ಮತ್ತು ಇಜ್ಜಣ್ಣನ ಹೆಂಡ್ತಿ ಲಿಡಿಯ ಹಾಗು ಸಿರಿಲನ ತಂಗಿ ರೋಸಿ ಮತ್ತು ಆಕೆಯ ಗಂಡ ಪೀಟರ್ ಅಂಗಳದ ಮುಂದೆ ಬೆಂಕಿಯನ್ನು ಹಾಕಿ ಚಳಿ ಕಾಯಿಸಿಕೊಳ್ಳುತ್ತಾ ಹರಟೆ ಹೊಡೆಯುತ್ತಿದ್ದರು. 

ಅಷ್ಟೊತ್ತಿಗೆ ಒಂದು ನಾಯಿ ಜೋರಾಗಿ ಬೊಗಳಲು ಶುರು ಮಾಡಿತು. ಪೀಟರ್, ಕುರಿಯಾ ಛೂ…  !! ಎಂದು ಹೊಡಿಸಿ ಬಂದು ಕುಳಿತ. 

ಎರಡು ನಿಮಿಷವಾದಂತೆಯೇ, ಎರಡು ನಾಯಿಗಳು ಊಳಿಡಲು ಆರಂಭಿಸಿದವು. ಕೋಪದಲ್ಲಿ ಹತ್ತಿರದಲ್ಲಿದ್ದ ಚಿಕ್ಕ ಕಲ್ಲನ್ನು ಎಸೆಯುತ್ತಿದ್ದಂತೆಯೇ ಮತ್ತೆರಡು ನಾಯಿಗಳು ಮತ್ತೆ ನಾಲ್ಕು ನಾಯಿಗಳು ಹೀಗೆ ಹತ್ತಕ್ಕಿಂತ ಹೆಚ್ಚುನಾಯಿಗಳು ಏನೋ ಕಂಡಂತೆ ಗುಡಿಸಿಲ ಹತ್ತಿರ ಬಂದು ಆರ್ಭಟ ಮಾಡುತ್ತಿದ್ದವು ಎರಡು ಮೂರೂ ನಿಮಿಷಗಳಲ್ಲಿ ಊರಿನಲ್ಲಿದ್ದ ಎಲ್ಲಾ ನಾಯಿಗಳು ಅಂಗಳದ ಬೆಂಕಿಯ ಮುಂದೆ ಸೇರಿ ಹುಚ್ಚುನಾಯಿಗಳಂತೆ ವರ್ತಿಸುತ್ತಿದ್ದವು. 

ಹೆದರಿ ಒಳಗೆ ಹೋಗಿ ಕುಳಿತಿರುವಾಗ ಪೀಟರ್ ಇವುಗಳ ಗಾಂಚಲಿ ಏನೆಂದು ನೋಡಿಯೆ ಬಿಡುವ ಎಂದು ಒಂದು ಹಗುರಾದ ಬಿದಿರನ್ನು ಹಿಡಿದು ಹೊಡಿಸಲು ಮುಂದೊದನು. 

ಏನೋ ಎಂಬಂತೆ ನಾಯಿಗಳು ಆತನ ಮೇಲೆ ಹಾರಲು ಶುರುಮಾಡಿದವು. ಕೋಲನ್ನು ಹಿಡಿದು ಹೊಡಿಸುತ್ತಿದಂತೆಯೇ ಇವುಗಳು ಹಂದಿಮಾಂಸದ ರುಚಿಗೆ ಬಂದ ಪಿಶಾಚಿಗಳು ಎಂದು ತಿಳಿಯುತ್ತಿದ್ದಂತೆ ಪ್ರಾರ್ಥನೆ ಮಾಡಲು ಶುರು ಮಾಡಿದರು. 

ಅಷ್ಟರಲ್ಲಿ ಟೌನಿಗೆ ಹೋಗಿದ್ದ ಜೀಪಿನ ಸೌಂಡು ಕೇಳಿಸಿತು. ಜೀಪಿನ ಹೆಡ್ಲೈಟ್ಸ್  ನಾಯಿಗಳ ಮೇಲೆ ಬೀಳುತ್ತ್ತಿದ್ದಂತೆಯೇ ಅವುಗಳು ಪರಾರಿಯಾದವು. ವಿಷಯ ತಿಳಿದ ನಂತರ ಇದಕ್ಕೆ ಹೆಂಗಸರನ್ನು ರಾತ್ರಿಯ ವೇಳೆ ಎಲ್ಲಿಯೂ ಕರೆದುಕೊಂಡು ಹೋಗಬಾರದು ಗೊಣಗಿಕೊಂಡು ಊಟಕ್ಕೆ ಕುಳಿತರು. 

ಇದೇನಿದೂ.. ಮಧ್ಯಾಹ್ನ ಇಷ್ಟು ಚೆನ್ನಾಗಿ ಇದ್ದ ಗಸಿ ಈಗ ಚಪ್ಪೆಯಾಗಿದೆ ಎಂದು ಇಜ್ಜಣ್ಣ ತಕರಾರು ತೆಗೆಯಲು ಪ್ರಾರಂಭಿಸಿದ.

ಅಷ್ಟೊತ್ತಿಗೆ ಲಿಡಿಯ ಈಗ ತಿನ್ನಿ ನಾಳೆ ಬೇಕಾದರೆ ಪೇಟೆಯಿಂದ ತಂದು ಮಾಡಿದರಾಯಿತು ಎಂದು ಸಮಾಧಾನ ಮಾಡಿ ಊಟವನ್ನು ಮುಗಿಸಿದರು.


ಮೆಣೆಸಿನ ಕಾರುಬಾರುಗಳೆಲ್ಲ ಮುಗಿದ ೩ ತಿಂಗಳ ನಂತರ ಒಮ್ಮೆ ಶಿಕಾರಿ ನೋಡಲು ಆಸೆಪಟ್ಟ ಮನೆಯ ಹೆಂಗಸರು ಇವತ್ತು ರಾತ್ರಿ ನಾವು ಕೂಡ ಶಿಕಾರಿಗೆ ಬರುತ್ತೇವೆ ಎಂದು ಹೇಳಿದರು. 

ಕಳೆದಸಲ ನಿಮ್ಮ ಧೈರ್ಯ ನಾವು ನೋಡಿದ್ದೇವೆ ಶಿಕಾರಿ, ಕಾಡುಸುತ್ತುವುದು ಇದು ಗಂಡಸರ ಕೆಲಸ ಎಂದು ಹೇಳಿ ಮನೆಯಲ್ಲೇ ಇರಲು ಹೇಳಿದರು. 

ಇವತ್ತು ಮನೆಯ ಹತ್ತಿರದ ತೋಟಕ್ಕೆ ಶಿಕಾರಿಗೆ ಹೋಗುತ್ತಿದ್ದಾರೆ ಎಂದು ತಿಳಿದ ಇವರು ಏನಾದರೂ ಆಗಲಿ ನಾನು ಬಂದೆ ಬರುತ್ತೇವೆ ಎಂದು ಹೇಳಿ ಹೊರಟರು. 

ತಮ್ಮ ತಮ್ಮ ಗಂಡಂದಿರ ಸಡಿಲವಿರುವ ಹಳೆಯ ಶರ್ಟನ್ನು ಧರಿಸಿ ಹೊರಟರು. 

ತೋಟವೆಲ್ಲ ಸುತ್ತು ಹಾಕಿ ಬೇಟೆಯನ್ನು ಹುಡುಕುತ್ತಿದ್ದಂತೆಯೇ ಹೇಡ್ಲೈಟ್ಸ್ ಬೆಳಕಿಗೆ ಒಂದು ಪ್ರಾಣಿ ಕಾಣಿಸಿತು ಸ್ವಲ್ಪ ಸರಿಯಾಗಿ ಫೋಕಸ್ ಮಾಡಿ ನೋಡಿದಾಗ ಸ್ವಲ್ಪ ದೂರದಲ್ಲಿ ಹಂದಿ ಕಾಣಿಸಿತು. 

ವಾರ್ಹ್ಹೆ ವಾ! ಎಂದು ಮನೆಯವರಿಗೆ ಏನನ್ನು ಸದ್ದು ಮಾಡಬಾರದು ಎಂದು ಸನ್ನೆ ಮಾಡಿ ಹೇಳಿ. 

ಬಂದೂಕು ಗಟ್ಟಿ ಹಿಡಿದು ಗುರಿ ಮಾಡಿದ. ಇನ್ನೇನು ಸಿಕ್ಕೇಬಿಟ್ಟಿತ್ತು ಎಂದು ಖುಷಿಯಿಂದ ಗುಂಡು ಒಡೆದ. 

ಅಷ್ಟೇ ತಡ ಇಡೀ ತೋಟದ ಒಂದೊಂದು ಮರಗಿಡಗಳಿಗೆ ಕೇಳಿಸುವಾಗೆ ಒಂದು ಧ್ವನಿ ಜೋರಾಗಿ “ಸತ್ಯಲೋ ಬಡ್ಡಿ ಮಗನೇ” ಎಂದು ಜೋರಾಗಿ ಕೇಳಿಸಿತು. 

ಆಕಾಶವೆಲ್ಲವು ಕಪ್ಪು ಕತ್ತಲಲ್ಲಿ ಏನೋ ನಿಗೂಢವಾದಂತಾಯಿತು. ಹಂದಿ ಬಿದ್ದ ಜಾಗವನ್ನು ನೋಡಿದಾಗ ಅಲ್ಲಿ ಯಾವ ಪ್ರಾಣಿಯು ಇರಲಿಲ್ಲ. 

ಯಾವ ರಕ್ತವೂ ಇರಲಿಲ್ಲ. 

ಹಾಗಾದರೆ ಅದು ಏನಾಗಿರಬಹುದು?

ಆ ವಿಚಿತ್ರ ಧ್ವನಿ ಯಾರದ್ದು?

ಮನೆಯವರೆಲ್ಲ ಹಂದಿಯ ರೂಪದಲ್ಲಿ ನೋಡಿದ್ದಾದರೂ ಏನು?

…. 

(ಮುಂದುವರಿಯುವುದು)

100%
OVERALL

Reviewed by 3 users

    • 1 year ago

    Looking forward

      • 1 year ago

      ಭಾಗ 2 ಈಗಾಗಲೇ ನಾನು ಪೋಸ್ಟ್ ಮಾಡಿದ್ದೇನೆ. ಬಿಡಿವಿದ್ದಾಗ ಓದಿ ನಿಮ್ಮ ಅನಿಸಿಕೆಯನ್ನು ತಿಳಿಸಿ
      ಧನ್ಯವಾದ

    • 1 year ago

    ತುಂಬಾ ಅದ್ಭುತವಾಗಿದೆ

      • 1 year ago

      ಭಾಗ 2 ಈಗಾಗಲೇ ನಾನು ಪೋಸ್ಟ್ ಮಾಡಿದ್ದೇನೆ. ಬಿಡಿವಿದ್ದಾಗ ಓದಿ ನಿಮ್ಮ ಅನಿಸಿಕೆಯನ್ನು ತಿಳಿಸಿ
      ಧನ್ಯವಾದ

  • It's our family story

    • 1 year ago

    Waiting for the NXT chapter

Leave feedback about this

  • Quality
  • Price
  • Service
Choose Image