ಗದ್ಯಂ ಹೃದ್ಯಂ

ಸಿರಿಲಣ್ಣನ ಶಿಕಾರಿ ಸಾಹಸಗಳು ಭಾಗ – 2 (b)

ಹಿಂದಿನ ಸಂಚಿಕೆಯಿಂದ ಪ್ರೇಮ್ ಗೌಡರ ತೋಟದಲ್ಲಿ ವಿಚಿತ್ರವಾದ ಸಂಗತಿಗಳು ನಡೆಯಲು ಆರಂಭಿಸಿದವು. ಕಾಫಿ ತೋಟದ ಬಡ್ಡೆಗಳಲ್ಲಿ ರಕ್ತವರ್ಣದ ನಿಂಬೆ ಹಣ್ಣುಗಳು. ಕೋಳಿಯ ಪುಕ್ಕಗಳು ಹಾಗು ತಾರಾ ತರಹದ ನೂಲಿನಲ್ಲಿ ಮಾಂತ್ರಿಸಿ ಕಟ್ಟಿಟ್ಟ ಉಂಡೆಗಳು ಎಲ್ಲವು ಅಲ್ಲಲಿ ಕಾಣಲು ಶುರುವಾಯಿತು. ದೈನಂದಿನ ತೋಟದ ಕೆಲಸಕ್ಕೆ ಹೋಗುತ್ತಿದ್ದವರೆಲ್ಲ ಹೆದರಿ ಬರುವುದಿಲ್ಲವೆಂದು ಬೇರೆ ಎಸ್ಟೇಟ್ಗಳಲ್ಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ವಿಷಯ ತಿಳಿಯುತ್ತಿದ್ದಂತೆ ಪ್ರೇಮ್ ಗೌಡರು ಏನೇನು ಪೂಜೆ ಮಾಡಿದರು ಅದಕ್ಕೆ ಸರಿಯಾದಂತ ಪರಿಹಾರ ದೊರಕಲಿಲ್ಲ

ಸೈಮನ್ ಕೀರ್ತಿ:  ರೀ ಮಂಜುನಾಥ್ ನಿಮಿಗೆ ಈ ದೆವ್ವ ಭೂತದ ಮಾಟ ಬಿಡಿಸೋವ್ರು ಗೊತ್ತಾ.

ಮಂಜುನಾಥ್: ಸರ್ ಇಲ್ಲಿ ರಾಮಪುರದಲ್ಲಿ ಸ್ವಲ್ಪ ಜನ ಈ ಮಾತಾ ಮಂತ್ರ ಬಿಡಿಸೋವ್ರು ಇದ್ದಾರೆ. ಬೇಕಾದ್ರೆ ಅವ್ರ್ನ ಒಂದು ಸಲ ಕರ್ಕೊಂಡು ಬಂದು ವಿಚಾರಣೆ ಮಾಡ್ಸೋಣ. 

ಅಂದ ಹಾಗೆ ಇದು ಯಾವ ಕೇಸ್ ಸರ್? 

ಸೈಮನ್ ಕೀರ್ತಿ: ಹೇಳ್ತಿನಿ, ಒಂದು ಸಲ ಅವ್ರಿಗೆ ಸ್ಟೇಷನ್ ಗೆ ಬರೋಕ್ಕೆ ಹೇಳಿ.  ಹಾಗೆ ಸಿರಿಲ್ ಮತ್ತೆ ಶಂಕರನ ಸ್ಟೇಷನ್ ಗೆ ಕರ್ಸಿ 

ನೆನ್ನೆ ಮತ್ತೆ ಶಿಕಾರಿ ಮಾಡಿದ್ದರಂತೆ ರಾಸ್ಕಲ್ಸ್. 

ಮಂಜುನಾಥ್: ಸರಿ ಸರ್ 

ಸ್ವಲ್ಪ ಸಮಯದ ಬಳಿಕ ಮಂಜುನಾಥ್ ಹಾಗು ಸೈಮನ್ ಇಬ್ಬರು ಮಾಟಗಾರರನ್ನು ಕರೆದು ವಿಚಾರಿಸಿದರು. 

ಅವರು ಪೊಲೀಸ್ ಠಾಣೆಯಿಂದ ಹೊರಗೆ ಹೋಗುತ್ತಿದ್ದಂತೆಯೇ ಸಿರಿಲ್ ಹಾಗು ಶಂಕರ ಇಬ್ಬರು ಒಳಗೆ ಬಂದರು. 

ಸಿರಿಲ್: ಸರ್ ನಮಸ್ತೆ ನೋಡಿ, ನೆನ್ನೆ ಶಿಕಾರಿಗೆ ಹೋಗಿರುವ ವಿಷಯ ನಿಮಗೆ ಬಂದಿದೆ ಅಂತ ಗೊತ್ತು. ನನ್ನ ಬಂದೂಕಿನಲ್ಲಿ ನಿಮ್ಮ ಡಿಪಾರ್ಟ್ಮೆಂಟ್ ಕಣ್ಣು ಇದೆ. ಆದ್ರೆ ನಾನು ಶಿಕಾರಿ ಮಾಡಿದ್ದು ಶಂಕರಣ್ಣನ ಜೊತೆ. 

ಸೈಮನ್ ಕೀರ್ತಿ: ಸಮಾಧಾನ. ನನಿಗೆ ನಿಮ್ಮ ಶಿಕಾರಿ ವಿಷಯ ಇಗಾ ಇಂಪಾರ್ಟೆಂಟ್ ಇಲ್ಲ. ನಿಮ್ಮ ಮಟಸಾಗರದಲ್ಲಿ ಯಾರಾದ್ರೂ ಸನ್ಯಾಸಿ, ಇಲ್ಲ ಬುಡುಬುಡುಕ್ಕೆಯವನು ಇದ್ದಾರಾ? 

ಸಿರಿಲ್: ಗೊತ್ತಿಲ್ಲ ಯಾಕೆ? 

ಸೈಮನ್ ಕೀರ್ತಿ: ಮೊನ್ನೆ ನಾನು ಒಂದು ಕೇಸ್ ವಿಷ್ಯಕ್ಕೆ ಅಂತ ಸ್ವಲ್ಪ ಬಾರ್ ಕಡೆ ಹೋಗಿದ್ದೆ ಅಲ್ಲಿ ಎರಡು ಜನ ತಮಿಳಿನಲ್ಲಿ ಮಟಸಾಗರದ ವಿಷಯದಲ್ಲಿ ಮಾತಾಡ್ತಾ ಇದ್ದರು. 

ಏನೋ ಹತ್ತು ಕೋಳಿ ಬೇಕು, ಜಾಗ ಹುಡ್ಕಿ ಅಂತ ಏನೇನೋ ವದರುತ್ತಿದ್ದ. ನನಿಗೆ ಸರಿಯಾಗಿ ಅಷ್ಟೊಂದು ಆ ಭಾಷೆ  ಬರಲ್ಲ. ಸಾಲದಕ್ಕೆ ನಿಮ್ಮ ಊರಿನಲ್ಲಿ ಅದೇನೋ ಕೋಳಿ ಪುಕ್ಕ ಅದು ಇದು ಅಂತ ಪ್ರೇಮ್ ಗೌಡ್ರು ಕಂಪ್ಲೇಂಟ್ ಕೊಟ್ಟಿದ್ದಾರೆ. ಅದಕ್ಕೆ ನಿಮ್ಮನ್ನ ಇಲ್ಲಿ ಕರೆಸಿದ್ದು 

ಶಂಕರಣ್ಣ: ಇದಕ್ಕೆಲ್ಲ ಕಾರಣ ಯಾರಂತ ನನಿಗೆ ಗೊತ್ತು ಆ ಮುದುಕ ರಂಗಸಾಮಿ. ನನಿಗೆ ಅವ್ನ ಮೇಲೇನೆ ದೌಟ್ ಇಲ್ಲೇ ಗೆಸ್ಟ್ ಹೌಸಲ್ಲಿ ಇದ್ದಾನೆ ಬನ್ನಿ ಹುಡ್ಕೋಣ 

ಕೀರ್ತಿ: ನೋಡಿ ಅವ್ನು ಏನೋ ಅನಾಹುತ ಮಾಡೋಕ್ಕೆ ಅಂತ ಊರಿಗೆ ಬಂದಿರೋ ಹಾಗಿದೆ ಬನ್ನಿ ಅವ್ನನ್ನ ವಿಚಾರಿಸೋಣ. 

ರಂಗಸಾಮಿ ಸಕಲೇಶಪುರದ ಎಲ್ಲ ಮೂಲೆ ಹುಡುಕಿದರೂ, ಒಂದು ವಾರದ ವರೆಗೂ ಯಾರ ಕಣ್ಣಿಗೂ ಕಾಣಲಿಲ್ಲ. 

ಆದರೆ, ಗದ್ದೆ ಬದಿಯಲ್ಲಿ, ಕಾಫಿ ಗಿಡಗಳ ಸಾಲಿನಲ್ಲಿ ಹೀಗೆ ಬೇಡವಾದ ಹಾಗು ಭಯ ಮೂಡಿಸುವಂತಹ ವಸ್ತುಗಳನ್ನು ಇಟ್ಟು ಆಚೆ ಈಚೆ ಓಡಾಡುವ ಜನರನ್ನು ಭಯ ಭೀತರಾಗಿ ಮಾಡಿಸುತ್ತಿರುವುದು ಯಾರು ಎಂದು ಕಂಡು ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರು ಅದು ಸರಿಯಾಗಿ ಆಗುತ್ತಿರಲಿಲ್ಲ. 

ಏಕೆಂದರೆ ಹದಿನೈದು ದಿನಗಳ ಹಿಂದೆಯೇ ಸುಮಾರು ಅರವತ್ತು ಆನೆಗಳ ಹಿಂಡು ಪಕ್ಕದ ಊರಿನಿಂದ ಈ ಊರಿಗೆ ಬಂದಿದ್ದ ಕಾರಣ ಯಾರಿಗೂ ತೋಟ ಸುತ್ತಿ ಮಾಟಗಾರನನ್ನು ಕಂಡು ಹಿಡಿಯುವ ಧೈರ್ಯ ಇರಲಿಲ್ಲ. 

ಒಮ್ಮೆ ಇನ್ಸ್ಪೆಕ್ಟರ್ ಸೈಮನ್ ಊರೊಳಗೆ ವಿಚಾರಣೆಗೆ ಎಂದು ಬೈಕಿನಲ್ಲಿ ಬರುತ್ತಿರುವಾಗ. ಗದ್ದೆಯ ಬೈಲಿನಿಂದ ಒಬ್ಬ ಹುಡುಗ ಒಂದೇ ಉಸಿರಿನಿಂದ  ಸಾರ್ ಸಾರ್ …  ಮುಂದಕ್ಕೆ ಗಾಡಿ ಓಡಿಸಬೇಡಿ ಎಂದು ಜೋರಾಗಿ ಹೇಳಿ ಓಡಿಬಂದ. 

ಆತನನ್ನು ನೋಡುತ್ತಿದ್ದಂತೆಯೇ ಏನೋ.. ಸ್ಕೂಲಿಗೆ ಹೋಗದೆ ಇಲ್ಲೇನು ಮಾಡುತ್ತಾ ಇದ್ದೀಯ ಎಂದು ಕೇಳಿದ 

ಸರ್ ಮುಂದೆ ಆನೆಗಳ ಹಿಂದೂ ಬರುತ್ತಾ ಇದೆ. ನೀವು ಬೈಕ್ ಅಲ್ಲಿ ಹೋದ್ರೆ ನಿಮ್ಮನ್ನ ಪುಡಿ ಮಾಡಿ ಬಿಡುತ್ತವೆ. ಬನ್ನಿ ಹೋಗೋಣ ಹಿಂದೆ ಏನು ಹೇಳಿದ. 

ಕೀರ್ತಿ: ಆನೆಗಳು ನಿನ್ನ ಕನಸಲ್ಲಿ ಬಂದು ಹೇಳಿದ್ವಾ? ನಾನು ಬರುತ್ತಾ ಇದ್ದೇವೆ ಎಂದು ಟೀಕಿಸಿದ. 

ಸರ್, ನಮ್ಮಜ್ಜಿ ಆಗೋ ಅಲ್ಲಿ ಕಾಣಿಸ್ತಾ ಇದ್ದೀಯಲ್ಲ ದೊಡ್ಡ ಹಲಸಿನ ಮರ ಅಲ್ಲಿಂದ ಹಲಸಿನ ಹಣ್ಣು ಕುಯ್ಯೋಕ್ಕೆ ಹೇಳಿದ್ರು ಮರದ ಮೇಲೆ ಇಂದ ನೋಡ್ದೆ ಆನೆಗಳು ಈಚೆ ಕಡೆಗೆ  

ಬರುತ್ತಾ ಇದೆ. ನಿಮ್ಮ ಬೈಕ್ ನೋಡಿ ನಾನು ಮರದಿಂದ ಇಳಿದು ಓಡಿ ಬಂದೆ. ಬನ್ನಿ ಹಿಂದೆ ಹೋಗೋಣ ಎಂದು ಸುಮನ್ ( ಸಿರಿಲಣ್ಣನ ಮಗ ) ಹೇಳಿದ. 

ಸರ್ ನಿಮಿಗೆ ಇಲ್ಲಿ ಜಾಗ ಗೊತ್ತಾಗೊಲ್ಲ ಬನ್ನಿ ನಾನೇ ಓಡಿಸ್ತಿನಿ ಎಂದು ಕರೆದುಕೊಂಡು ಹೋದ. ಹದಿನೇಳು ವರ್ಷದ ಬಾಲಕನ ಧೈರ್ಯಕಂಡು ಕೀರ್ತಿಗೆ ಆಶ್ಚರ್ಯವಾಯಿತು. 

ಗಾಡಿ ಓಡಿಸುತ್ತಿರುವಾಗ, ನಿನಗೆ ಆನೆಯ ಭಯ ಇಲ್ವಾ ಎಂದು ಕೇಳಿದಕ್ಕೆ 

ನಾನು ಅವುಗಳ ಜೊತೆ ಎಷ್ಟೋ ಸೆಲ್ಫಿ ತೆಗೆದುಕೊಂಡಿದೀನಿ ಎಂದು ಹೆಮ್ಮೆಯಿಂದ ಹೇಳಿದ. ಬೈಕ್ ಊರಾಚೆ ತಲುಪುತ್ತಿದ್ದಂತೆಯೇ ಗಾಡಿಯನ್ನು ನಿಲ್ಲಿಸಿ. 

ಸರ್ ನೀವು ಇನ್ನು ಹೊರಡಿ. ನಾಳೆ ಸ್ವಲ್ಪ ಹಗಲೊತ್ತಲ್ಲಿ ಬನ್ನಿ. ಸಂಜೆ ಹೊತ್ತಿಗೆ ಆನೆಗಳು ಓಡಾಡುತ್ತಾ ಇರುತ್ತವೆ ತಾನಿನ್ನು ಹೋರಾಡುವುದಾಗಿ ಹೇಳಿದ. 

ಮರು ದಿವಸ ಬೆಳಿಗ್ಗೆ ಇನ್ಸ್ಪೆಕ್ಷನ್  ಹೋಗಿ ಇನ್ಸ್ಪೆಕ್ಟರ್ ಕೀರ್ತಿ ರಾತ್ರಿ ಸುಮನ್ ಮನೆಗೆ ಬಂದು ತನ್ನನು ಶಿಕಾರಿಗೆ ಹೋಗುವ ತೋಟಕ್ಕೆ ಕರೆದುಕೊಂಡು ಹೋಗು ರಾತ್ರಿ ಏಳು ಗಂಟೆಗೆ ಸುಮನ್ ಮನೆಗೆ ಬರುವುದಾಗಿ ಹೇಳಿ ಹೊರಟನು. 

ಸಂಜೆ ಕತ್ತಲಾಗುತ್ತಿದ್ದಂತೆಯೇ ಬಂದು ಸುಮನನ್ನು ಕರೆದುಕೊಂಡು ಪ್ರೇಮ್ ಗೌಡರ ತೋಟಕ್ಕೆ ಹೋದನು. ಆನೆಗಳ ಸಗಣಿಯ ನಾತಕ್ಕೆ ಹಿಂಡು ಹಿಂಡು ನೋಣಗಳು ಗುಯ್ಯ್ ಎಂದು ಮುತ್ತಿಕೊಳ್ಳುತಿದ್ದವು. 

ಇದೆಲ್ಲ ಅಭ್ಯಾಸವಿಲ್ಲದ ಕೀರ್ತಿ ಥೂತ್.. ಎನ್ನುತ ಸುಮನನ್ನು ಹಿಂಬಾಲಿಸಿ ಹೊರಟನು. 

ಇತ್ತ ಸಿರಿಲಾ ಮನೆಗೆ ಬಂದೊಡನೆ ಸೋಬಿನಾ, ರೀ… ಪೊಲೀಸ್ ಮನೆಗೆ ಬಂದಿದ್ರು ಮಗನ್ನ ಕರ್ಕೊಂಡು ಪ್ರೇಮ್ ಗೌಡ್ರು ತೋಟದಕಡೆ ಹೋದ್ರು 

ಸಿರಿಲ್: ಏನು! ಅಲ್ಲಿ ಐವತ್ತೈದು ಆನೆಗಳು ಬಂದಿದ್ದವಂತೆ ಆ ಬಡ್ಡಿಮಗ ಪೊಲೀಸ್ ಗ್ರಹಚಾರ ಇವತ್ತು ಬಿಡಿಸ್ತೀನಿ. 

(ಫೋನ್ ಮಾಡುತ್ತಾ) ಏಯ್ ಸದಾ, ಮನೆಗೆ ಪೊಲೀಸ್ ಬಂದು ನನ್ನ ಮಗನ ತೋಟಕ್ಕೆ ಕರ್ಕೊಂಡು ಹೋಗಿದ್ದನಂತೆ ಬಾ ಇವತ್ತು ಏನಾದ್ರೂ ಆಗ್ಲಿ ಆ ಪೊಲೀಸ್ ಬಿಡೋದೇ ಬೇಡಾ 

ಶಂಕರಣ್ಣ ಒಲ್ಲರ್, ಬೈಕ್ ದೆತೊಂದು ಬರ್ಪೆ ಬೇಗ ಪಿದಾಡ್ಲೆ 

ಟಾರ್ಚ್ ಲೈಟ್, ಕಟ್ಟಿ, ದೊಣ್ಣೆ, ಸೀಮೆಎಣ್ಣೆ ಕ್ಯಾನ್ ಮತ್ತು ಶಂಕರಣ್ಣನ ಬಂದೂಕನ್ನು ತೆಗೆದುಕೊಂಡು ಮೂವರು ಹೊರಡುವ ಸಮಯದಲ್ಲಿ ವಿಷಯ ತಿಳಿದ ಸಂಜೀವ ಸುರೇಂದ್ರ ಇಬ್ಬರು ತಾವು ಬರುವುದಾಗಿ ಹೇಳಿದರು. ಮನಸ್ಸಿಲ್ಲದೆ ಸಿರಿಲಾ ಅವರನ್ನು ಕರೆದುಕೊಂಡು ಹೋದನು. 

ತೋಟದ ಒಳಗೆ ಕಾಲು ಇಡಲು ಯಾರಿಗೂ ಧೈರ್ಯವಿಲ್ಲ ಆದರೆ, ಮಗ ರಾತ್ರಿ ಹತ್ತು ಗಂಟೆಯಾದರೂ ಮನೆಗೆ ಬಾರದೆ ಹೋದ ಕಾರಣಕ್ಕೆ ಇವರು ಈ ಸಾಹಸಕ್ಕೆ ಇಳಿದರು. 

ತೋಟದ ಒಳಗೆ ನಗ್ಗಿದಂತೆ ಎಲ್ಲವು ನಿಶಬ್ದ ಮೌನವಾಗಿ, ಏನನ್ನು ಮಾತನಾಡದೆ. ಟಾರ್ಚ್ ಇದ್ದರು ಬೆಳಕನ್ನು ಹಾಕದೆ, ಚಂದ್ರನ ಬೆಳಕಿನಲ್ಲೇ  ಅರ್ಧ ಗಂಟೆ  ನಡೆದು ದಿಬ್ಬವನ್ನು ಹತ್ತಿದರು. 

ದಿಬ್ಬದ ಒಂದು ಬದಿಯಲ್ಲಿ ಸುಮನ್ ಮತ್ತು ಕೀರ್ತಿ ಕುಳಿತುಕೊಂಡು ಯಾರಿಗೋ ಕಾಯುತ್ತಿದ್ದಂತೆ ಇತ್ತು. 

ಅದನ್ನು ನೋಡಿದ ಸಿರಿಲ್, ಸುಡುವಷ್ಟು ಕೋಪವಿದ್ದರೂ ಹಲ್ಲುಕಚ್ಚಿಕೊಂಡು ಕೀರ್ತಿಯ ಬಳಿ ಹೋಗಿ. 

ನಿಮಿಗೆ ಏನು ಹುಚ್ಚು ಹಿಡಿದಿದ್ದೀಯ?

ಈ ರಾತ್ರಿಯಲ್ಲಿ ಹುಡುಗನನ್ನು ಇಲ್ಲಿ ಕರ್ಕೊಂಡು ಬಂದಿದ್ದೀರಾ ಎಂದು ಹೇಳುತ್ತಿರುವಾಗ. ಕೋಳಿಗಳು ಕೂಗುವುದು ಕಿವಿಗೆ ಬಿತ್ತು. 

ಸುತ್ತ ಮುತ್ತ ಐದಾರು ಕಿಲೋಮೀಟರಿನಲ್ಲಿ ಒಂದು ಮನೆಯು ಇಲ್ಲ. ಹಾಗಿದ್ದರೆ ಈ ಕೋಳಿಗಳು ಯಾರದ್ದು ಎಂದು ಯೋಚಿಸತೊಡಗಿದರು. ಅಷ್ಟೇ ಅಲ್ಲದೆ ಕೆಂಪು ಬಣ್ಣದ ನಿಂಬೆಗಳು, ಮೂಳೆಯ ಮಾಲೆಗಳು, ಕಪ್ಪು ಬಣ್ಣದ ನೂಲುಗಳೆಲ್ಲವೂ ಇದ್ದವು.

ದಿಬ್ಬದ ಹತ್ತಿರವಿರುವ ಒಂದು ದೊಡ್ಡ ಹಲಸಿನ ಮರದ ಕೆಳಗೆ ಎಲ್ಲರು ಅವಿತು ಕೊಂಡರು. 

ಸುಮನ್, ಕೀರ್ತಿ ಹೇಳಿದಂತೆಯೇ ಮರದ ಮೇಲೆ ಕುಳಿತುಕೊಂಡು. ಯಾರಾದರೂ ಬರುವುದು ಕಂಡರೆ ಹೇಳುವುದಾಗಿ ಹೇಳಿದ. 

ಸುರೇಂದ್ರ ಸ್ವಲ್ಪ ಪುಕ್ಕಲ, ಆತನ ಪ್ರೇಯಸಿಯ ಮುಂದೆ ಹೀರೋ ಆಗಿ ತಿರುಗಾಡಿ ಒಲಿಸಬೇಕು ಎಂದು ಶಂಕರಣ್ಣನ ಹತ್ತಿರ ಶಿಕಾರಿ ಕಲಿಯುವುದಕ್ಕೆ ಸೇರಿಕೊಂಡಿದ್ದ. 

ಆದರೆ ಇವತ್ತು ಅವರು ಬಂದದ್ದು ಶಿಕಾರಿಗಲ್ಲ ಯಮನ ಮನೆಯ ಅಂಗಳಕ್ಕೆ. ಒಂದು ಕಡೆ ಮಾಟ ಮಾಡಲು ತಂದಿಟ್ಟ ಕೋಳಿಗಳು. ಇನ್ನೊಂದು ಕಡೆ ಆನೆಗಳು ಯಾವ ದಿಕ್ಕಿನಿಂದ ಬಂದು ಏತ್ತಂಗಡಿ ಮಾಡಿ ಲಗೋರಿ ಆಡಿಬಿಡುತ್ತವೆಯೋ ಎನ್ನುವ ಜೀವ ಭಯ. 

ಸುರೇಂದ್ರ : ನಾನು ಬರೋಲ್ಲ ಅಂತ ಹೇಳ್ದೆ. ಬೇವರ್ಸಿ ನನ್ಮಗನೇ ನಂ ಹುಡುಗಿ ಮುಂದೆ ಸಿರಿಲಣ್ಣ ನಾವು ಬರ್ತೀವಿ ಅಂತ ಹೇಳಿ ಸಂಜೀವನಿಗೆ ಇಲ್ಲಿ ಕರ್ಕೊಂಡು ಬಂದಿದ್ದೀಯಾ ಅಂತ ಇಡಿ ಇಡಿ ಶಾಪ ಹಾಕುತ್ತಿದ್ದ. 

ಕೀರ್ತಿ ಸುರೇಂದ್ರನ ಹತ್ತಿರ ಬಂದು, ಮರ್ಯಾದಿಯಿಂದ ಸುಮ್ನೆ ಕುತ್ಕೊಂಡ್ರೆ ಸರಿ. ಇಲ್ಲಾಂದ್ರೆ ನಾಳೆ ಸ್ಟೇಷನ್ಗೆ ಕರ್ಕೊಂಡು ಹೋಗಿ ಇನ್ವೆಸ್ಟಿಗೇಷನ್ ಟೈಮ್ ಅಲ್ಲಿ ಎವಿಡೆಂಟ್ಸ್ ಹಾಳ್ ಮಾಡ್ತಾ ಇದ್ದ ಅಂತ ಒಂದು ವಾರ ಲಾಕಪ್ ಅಲ್ಲಿ ಕೂರಿಸಿ ಬಿಡ್ತಿನಿ ಹುಷಾರ್ ಎಂದ. 

ಮರದ ಮೇಲೆ ಕೂತಿದ್ದ ಸುಮನ್, ಸಾರ್ ಯಾರೋ ಲ್ಯಾಂಟರ್ನ್ ಇಟ್ಟುಕೊಂಡು ಬರುತ್ತಾ ಇದ್ದಾರೆ ಎಂದು ಹೇಳಿದ. 

ಕೀರ್ತಿ ಅಲ್ಲಿದ್ದವರೆಲ್ಲರನ್ನು ಸುಮ್ಮನಿರುವಂತೆ ಹೇಳಿದ. 

ಲ್ಯಾಂಟರ್ನ್ ಹಿಡಿದುಕೊಂಡು ಬರುವ ವ್ಯಕ್ತಿ ಹತ್ತಿರ ಬರುತ್ತಿದ್ದಂತೆಯೇ ಕಗ್ಗತ್ತಲಲ್ಲಿ ಬೆಳಕು ಒಮ್ಮೆಲೇ ಅವರ ಕಣ್ಣುಗಳ ಮೇಲೆ ಬಿದ್ದಿತು. 

ಲ್ಯಾಂಟರ್ನ್ ದೀಪದಲ್ಲಿ ಬಂದವನು ಒಬ್ಬನಲ್ಲ ಇಬ್ಬರು. ಕೋಳಿಗಳನ್ನು ಕಟ್ಟಿಟ್ಟ ಜಾಗದ ಬಳಿ ಹೋದರು. 

ಓಂ ಕ್ಲೀ೦ ಕ್ರೀ೦….ಮುಕ್ಕಾಲ ಮುಕ್ಕಬುಲ್ಲಾ ಓ ಲೈಲಾ..   ಎಂದು ಒಬ್ಬ ಜೋರಾಗಿ ನಗಾಡಿಕೊಂಡು ಹಾಡು ಹಾಡುತ್ತ ಕೋಳಿಯನ್ನು ಗಂಟಿನಿಂದ ಬಿಚ್ಚಿ ಅದನ್ನು ಕುಯ್ಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ  , “

ಕೋಪಗೊಂಡ ಮತ್ತೋರ್ವ.. “ಸೇರುಪಾಲೇ ಅಡಿಪೆ ಸನಿಯೇ” ನೀನು ಏನು ಹೀರೋನ  ಲೋಪರ್.. ಸರಿಯಾಗಿ ಕೋಳಿ ಇಡ್ಕೊ  ಎಂದು ತಮಿಳಿನಲ್ಲಿ ಮಾತನಾಡುತ್ತಿರುವಾಗ 

ಸಿರಿಲ, ಸಣ್ಣ ಪ್ಪು, ಶಂಕರಣ್ಣ, ಕೀರ್ತಿ ಎಲ್ಲರು ಸೇರಿ ಹಿಂಬದಿಯಿಂದ ಆ ಇಬ್ಬರು ಯುವಕರನ್ನು ಹಿಡಿದು ಸರಿಯಾಗಿ ಥಳಿಸಿದರು. 

ಅಯ್ಯಯ್ಯೋ ಅಯ್ಯ್ಯಓಓಓಓಓ ಎಂದು ಚೀರಿಕೊಳ್ಳುತ್ತ 

ಹಂದಿ ನನ್ಮಕ್ಕುಳ್ರ… ಇಷ್ಟು ದಿನ ಮಾಟ ಮಂತ್ರ ಅಂತ ಊರಲ್ಲಿ ಆಟ ಆಡಿದ್ದು ನೀವೇನಾ…?

ಕೀರ್ತಿ ಇಬ್ಬರ ಕೈಗಳಿಗೆ ಹ್ಯಾಂಡ್ ಕಫ್ ಹಾಕಿ. 

ನಿಜ ಏನು ಅಂತ ಹೇಳ್ತೀರಾ ಅಥವಾ ಜೀವನಪೂರ್ತಿ ಜೈಲಲ್ಲಿ ಕೊಳಿತೀರಾ?

ಒಬ್ಬ: ಸರ್ ನನಕೆ ಏನು ಗೊತ್ತಿಲ್ಲ. 

ಮತ್ತೊಬ್ಬ: ಸಾರ್ ಕೋಳಿ ಕುಯ್ದು ಕೊಟ್ರೆ ದಿನಕ್ಕೆ ಮುನ್ನೂರು ರುಪಾಯಿ ಕೊಡ್ತಿನಿ ಅಂತ ಹೇಳಿದಕ್ಕೆ ನಾವು ಇಲ್ಲಿಗೆ ಬಂದಿದ್ದೀವಿ ಬೇರೆ ಏನು ಕದಿಯೋಕ್ಕೂ ಇಲ್ಲ ತೋಟ ಹಾಳ್ ಮಾಡೋಕ್ಕೂ ಅಲ್ಲ ಸಾರ್ 

ಕೀರ್ತಿ : ಯಾರ್ರೋ ನಿಮ್ಮನ ಇಲ್ಲಿ ಕರೆಸಿದ್ದು? 

ಇಬ್ಬರು: ನಮ್ಮ ಮೊದಲಾಳಿ ಸರ್…  ಸರ್ ಈಗ ಅವ್ರು ಬರೋ ಹೊತ್ತು ನಮ್ಮನ ಬಿಟ್ಟುಬಿಡಿ ಎಲ್ಲಾದ್ರೂ ದೂರ ಹೋಗ್ತಿವಿ ಮತ್ತೆ ಬರಲ್ಲ ಈಕಡೆ. 

ಎಲ್ಲರು ಇಬ್ಬರ ಬಾಯಿಗೆ ಬಟ್ಟೆಯನ್ನು ತುರುಕಿ ಅದೇ ಆಲಸಿನ ಮರಕ್ಕೆ ಕಟ್ಟು ಹಾಕಿದರು. ಸಣ್ಣಪ್ಪು, ಸಂಜೀವ ಮತ್ತು ಸುರೇಂದ್ರನಿಗೆ ಬೇರೆ ದಾರಿ ಹಿಡಿದು ಮನೆಗೆ ಹೋಗಿ  ತನ್ನ ಕಾರು ತರಲು ಹೇಳಿ ಕಳುಹಿಸಿದ. 

ಇಪ್ಪತ್ತು ನಿಮಿಷದ ಕಾಲ ಮೌನವಾಗಿತ್ತು. 

ಮರದ ಮೇಲೆ ನಿಂತಿದ್ದ ಸುಮನ್ ಇನ್ನೊಂದು ಸಂದೇಶ ಪಿಸುಗೂಡಿದ. 

ದೂರದಿಂದಲೇ ಯಾವುದೊ ಹಾಡು ಹೇಳಿ ಬರುತ್ತಿದ್ದವನು ಕೋಳಿ ಗೋಡಿನ ಹತ್ತಿರ ಬರುತ್ತಿದ್ದಂತೆಯೇ 

ಹೇಯ್ ಎಲ್ರೋ ಇದ್ದೀರಾ? ಎಂದು ಗೂಡಿನ ಬಳಿ ಬಂದು ಸುತ್ತಲೂ ನೋಡಲು ಶುರು ಮಾಡಿದ. 

ಹಿಂದೆಯಿಂದ ಸಿರಿಲ್ ಚಳಿಗೆ ಎಂದು ಹಾಕಿದ್ದ ಸ್ವೇಟರ್ ಅನ್ನು ಬಿಚ್ಚಿ. 

ಆ ಗಂಡಸಿನ ಮುಖದ ಮೇಲೆ ಹಾಕಿ. ಪಟ  ಪಟನೆ ಕೆನ್ನೆಗೆ ಬಾರಿಸಿದ. ನಡೆಯುತ್ತಿಯುವ ಅನಾಚಾರಕ್ಕೆಲ್ಲ ಕಾರಣ ಬೇರೆಯಾರು ಅಲ್ಲ ಅದು ರಂಗಸಾಮಿ ಅಂತ ಎಲ್ಲರಿಗು ತಿಳಿದು ಬಿಟ್ಟಿತ್ತು 

ಏನೋ ಬದ್ಮಾಶ್.. ನೀನೇನಾ ಈ ಹುಡುಗರ ಗುರು? ಎಂದು ಛಟೀರನೆ ಕೆನ್ನೆಗೆ ಬಾರಿಸಿ ಎಳೆದುಕೊಂಡು ಹೋದರು 

ಸಣ್ಣಪ್ಪು ಕಾರಿನಲ್ಲಿ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋದ ನಂತರ 

ರಂಗ ಸಾಮಿಯನ್ನು ಯಾವ ಕಾರಣಕ್ಕಾಗಿ ಈ ರೀತಿಯಾಗಿ ಮಾಡುತ್ತಿರುವುದು ಎಂದು ಪೊಲೀಸ್ ಠಾಣೆಯಲ್ಲಿ  ವಿಚಾರಿಸಿದಾಗ, 

ರಂಗಸಾಮಿ: ಸರ್, ನಾನು ಈ ಊರು ಬಿಟ್ಟು ಇಪ್ಪತ್ತು ವರ್ಷಗಳಾಗಿತ್ತು. 

ಕೀರ್ತಿ: ನಿನ್ನ ಬಗ್ಗೆ ಎಲ್ಲ ತಿಳ್ಕೊಂಡೆ ಬಂದಿದ್ದೀನಿ. ಇಪ್ಪತ್ತು ವರ್ಷದ ಹಿಂದೆ ವನಜಾಕ್ಷಿ ಅನ್ನೋ ಒಂದು ಹುಡುಗಿನ ಬಸುರಿ ಮಾಡಿ ಬಿಟ್ಟೋದವನು ನೀನು. ನೀನು ಊರು ಬಿಟ್ಟು ಓಡೋಗಿದಿಯ ಅಂತ ಆ ಅಮಾಯಕ ಹುಡುಗಿ ಕೆರೆಗೆ ಬಿದ್ದು ಸತ್ತಳು 

ರಂಗಸಾಮಿ: ನೀವು ಹೇಳಿದ್ದು ನಿಜ. ಆದರೆ ನಾನು ಅವಳ ಸಾವಿಗೆ ಕಾರಣ ಅಲ್ಲ. 

ಇದಕ್ಕೆಲ್ಲ ಕಾರಣ ಆ ಮಾದೇವ್ ಗೌಡ್ರು. 

ವನಜಾಕ್ಷಿಯನ್ನ ನಾನು ಇಷ್ಟಪಟ್ಟಿದ್ದೆ. ಅವಳು ನನ್ನನು ಇಷ್ಟ ಪಟ್ಟಿದ್ಲು. ಆದ್ರೆ ನಾನು ಅವಳ ಮೈ ಮುಟ್ಟಲಿಲ್ಲ. 

ಒಂದು ದಿನ ಕಿತ್ತಳೆ ತೋಟಕ್ಕೆ ಬಂದು ವನಜಾಕ್ಷಿ ಹೇಳಿದ್ಲು.. ನಮ್ಮಿಬ್ಬರ ಜಾತಿ ಬೇರೆ. ಅಪ್ಪಯ್ಯ ನನ್ನ ಮಂಗಳೂರಿಗೆ ಕಳ್ಸಿ ಓದಿಸಿದ್ದಾರೆ. ನಾನು ಇಲ್ಲಿಗೆ ಕೆಲ್ಸಕ್ಕೆ ಬರೋದು ಅಪ್ಪಯ್ಯಂಗೆ ಇಷ್ಟ ಇಲ್ಲ. ಟೈಲೊರ್ ಅಂಗಡಿ ಇಡೋಕ್ಕೆ ದುಡ್ಡು ಬೇಕು ಅಂತ ಕಾರಣ ಕೊಟ್ಟಿದೀನಿ. ಇನ್ನು ಮುಂದೆ ನಾನು ಇಲ್ಲಿಗೆ ಬರೋಲ್ಲ ಅಂತ ಹೇಳಿ ಹೋದ್ಲು. ಅದು ನಡೆದು ಸುಮಾರು ಮೂರು ತಿಂಗಳು ನಾನು ಅವಳನ್ನ ದೂರದಿಂದಲೇ ನೋಡುತ್ತಿದ್ದೆ. 

ನಾನು ಊರಿಗೆ ಹೋದಾಗ ನನ್ನ ತಂದೆ ತಾಯಿ ಒತ್ತಾಯದಿಂದ ಸೇಲಂ ನಲ್ಲಿರುವ ನಮ್ಮ ಸಂಬಂದಿಕರ ಹುಡುಗಿ ಜೊತೆ ನಿಶ್ಚಯ ಮಾಡಿ ಮತ್ತೆ ನನ್ನ ಇಲ್ಲಿ ಕೆಲಸಕ್ಕೆ ಕಳುಹಿಸಿ ಕೊಟ್ರು. 

ಒಂದು ದಿನ, ವನಜಾಕ್ಷಿ ಕಿತ್ತಳೆ ತೋಟದ ಮನೆ ಹತ್ತಿರ ಬಂದು, ತಾನು ಮೂರು ತಿಂಗಳ ಗರ್ಭಿಣಿ ಎಂದು ಹೇಳಿದಾಗ ನನಗೆ ಕೈ ಕಾಲು ಮರಗಟ್ಟಿದ ಹಾಗೆ ಆಯಿತು. 

ನಾನು ತಪ್ಪು ಮಾಡಿಬಿಟ್ಟೆ ರಂಗಸಾಮಿ , ಮನೆಯವರೆಲ್ಲ ನಿನ್ನ ಮೇಲೆ ಕಣ್ಣು ಇಟ್ಟಿದ್ದಾರೆ. ಸದ್ಯಕ್ಕೆ ನನ್ನ ಪರಿಸ್ಥಿತಿ ಸರಿಯಿಲ್ಲ ಮುಂದಿನ ವಾರ ನಾನು ಮಂಗಳೂರಿಗೆ ಹೋಗ್ತೀನಿ ದಯವಿಟ್ಟು ನನಿಗೆ ಇದೊಂದು ಉಪಕಾರ ಮಾಡು ಅಂತ ಹೇಳಿದ್ಲು. 

ನಾನು ಅವಳಿಗೆ ಯಾವ ಉಪಕಾರ ಮಾಡಲು  ಒಪ್ಪಿಕೊಂಡಿಲ್ಲ. ಯಾರದ್ದು ಎಂದು ತಿಳಿಯದ ಮಗುವಿಗೆ ನಾನು ಯಾಕೆ ಅಪ್ಪ ಅಂತ ಹೇಳ್ಬೇಕು? ಅದಲ್ಲದೆ ನನಿಗೆ ನಿಶ್ಚಿತಾರ್ಥ ಬೇರೆ ಆಗಿತ್ತು. ಅದನ್ನೇ ನಾನು ಅವಳಿಗೆ ಹೇಳಿದೆ. 

ಅವಳು ಕಣ್ಣೀರು ಹಾಕುತ್ತ ಅವಳ ಮನೆ ಕಡೆ ಹೋದ್ಲು. ಮತ್ತೆ ಸಂಜೆ ಒಂದು ಏಳು ಏಳುವರೆ ಅಷ್ಟೊತ್ತಿಗೆ ಒಬ್ಬಳೇ ಮಾದೇವ್ ಗೌಡ್ರು ಮನೆಕಡೆ ಹೋಗ್ತಾ ಇದ್ಲು ನಾನು ಅವಳ ಹಿಂದೆ ಹೋದೆ. 

ಗೌಡ್ರು ತೋಟದಲ್ಲಿ ಒಂದು ಕುರ್ಚಿಮೇಲೆ ಕೂತಿದ್ರು ಜೊತೇಲಿ ಅವರ ನಂಬಿಗಸ್ಥ ಕೆಲಸದ ಆಳು ಕರಿಯನು ಇದ್ದ. 

ವನಜಾಕ್ಷಿ ಗೌಡ್ರು ಕಾಲು ಇಟ್ಕೊಂಡು ತುಂಬ ಹೊತ್ತು ಅಳುತ್ತ ತನ್ನನು ಮಾಡುವೆ ಆಗುವಂತೆ ಕೇಳಿಕೊಳ್ಳುತ್ತಾ ಇದ್ಲು. 

ಆದರೆ ಗೌಡ್ರಿಗೆ ಆಗಾಗಲೇ ಮದುವೆಯ ಪ್ರಾಯದ ಮಕ್ಕಳಿದ್ರು.

ಆಕೆಯನ್ನು  ಮಂಗಳೂರಿಗೆ ಕಳುಹಿಸಿ ಅಲ್ಲೇ ಯಾವುದಾದರೂ ಬಾಡಿಗೆ ಮನೆ ಕೊಡಿಸುವಂತೆ ಹೇಳಿದಳು 

ಆದರೆ ಅವಳು ಇಲ್ಲ.. ಅಪ್ಪಯ್ಯಂಗೆ ವಿಷ್ಯ ಗೊತ್ತಾಗಿದೆ ಅವ್ರು ರಂಗಸಾಮಿ ಮೇಲೆ ಕಣ್ಣಿಟ್ಟಿದ್ದಾರೆ. ರಂಗಸಾಮಿಗೆ ಇನ್ನೆರಡು ತಿಂಗಳಲ್ಲಿ  ಮದುವೆ ಇದೆ ಅವನ ಜೀವನ ಹಾಳಾಗಬಾರದು. ಅಪ್ಪಯ್ಯ ಆಳುಗಳಿಗೆ ವಿಷಯ ಹೇಳಿದ್ರೆ ಅವ್ರು ಕೊಂಡು ಹಾಕುತ್ತಾರೆ ಎಂದು ಹೇಳಿ ಆಕೆಯನ್ನು ಮದುವೆಯಾಗಲೇ ಬೇಕು ಎಂದು  ತುಂಬ ಹೊತ್ತು ಗೌಡ್ರು ಹತ್ತಿರ ಕಾಡಿಬೇಡುತ್ತ ಇದ್ದಳು. 

ಗೌಡ್ರು ಅವತ್ತು ಸ್ವಲ್ಪ ಕುಡ್ದಿದ್ರು.  ಕರಿಯನ ಕೈಯಲ್ಲಿ ಅವರ ಎಲೆ-ಅಡಿಕೆ ಪೆಟ್ಟಿಗೆ ಇತ್ತು. ಕೋಪ ದಿಂದ ಅವಳ ತಲೆಗೆ ಹೊಡೆದ್ರು ಅವಳ ಪ್ರಾಣ ಅಲ್ಲೇ ಹೋಯ್ತು. ಕರಿಯ ಮತ್ತೆ ಗೌಡ್ರು ಆಕೆಯ ಶವನ್ನು ಕೆರೆಗೆ ಎಸೆದರು. 

ಇದೆಲ್ಲ ನನ್ನ ಕಣ್ಣುಮುಂದೇನೇ ನೋಡಿದ್ರು ನನಗೆ ಏನು ಮಾಡೋಕ್ಕೆ ಆಗಿಲ್ಲ ಅದಕ್ಕೆ ಅವತ್ತು ರಾತ್ರೋರಾತ್ರಿ  ಮನೆ ಬಿಟ್ಟೋದೆ. ಮತ್ತೆ ಬರ್ಲಿಲ್ಲ. 

ನಂಬೋಕ್ಕಾಗಲ್ಲ ಅಂತ ಇದ್ರೆ, ಹೋಗಿ ಕರಿಯನ ಹೆಂಡತಿ ಇವಾಗ್ಲೂ ಲೈನ್ ಮನೆಯಲ್ಲಿ ಇದ್ದಾಳೆ. 

ಅಮಾವಾಸ್ಯೆ ರಾತ್ರಿ ಅವರ ಮನೇಲಿ ಏನೆಲ್ಲಾ ನಡಿಯುತ್ತೆ ಅಂತ ವಿಚಾರಿಸಿ. 

ಕೀರ್ತಿ:  ಸರಿ ಇವಾಗ ಯಾಕೆ ಊರೊಳಗೆ ಈ ಮಾಟ ಮಂತ್ರ ಆತ ಆಡುತ್ತ ಇದ್ದೀಯ?

ರಂಗಸಾಮಿ: ನಂಗೆ ಇಷ್ಟವಾಗಿದ್ದು ಈ ಊರು ಸ್ವಾಮೀ.. ನನ್ನ ಪಾಡಿಗೆ ನಾನು ಇಲ್ಲಿ ಕೆಲಸ ಮಾಡ್ಕೊಂಡು ಇದ್ದವನು ಆದ್ರೆ ಆ ಗೌಡ್ರು ಸ್ವಾರ್ಥಕ್ಕೆ ನಾನು ಊರು ಬಿಟ್ಟು ಹೋಗಬೇಕಾಯಿತು. ಎಲ್ಲರ ಬಾಯಿಯಲ್ಲಿ ರಂಗಸಾಮಿ ವೆಂಕಣ್ಣ ಮಗಳನ್ನ ಹಾಲು ಮಾಡ್ದ, ರಂಗಸಾಮಿನ ಅವಳನ್ನ ಕೊಂದು ಹಾಕಿದ್ದು ಅಂತ ಊರಲೆಲ್ಲಾ ನನ್ನ ಬಗ್ಗೆ ಕೆಟ್ಟು ಹೆಸರು ಬರೋ ಹಾಗೆ ಮಾಡಿದ್ದು ಅವ್ನೆ. 

ಅದಕ್ಕೆ ಮತ್ತೆ ಊರಿಗೆ ಬಂದ್ರೆ ನಾನು ಸಾಹುಕಾರನಾಗಿ ಇರಬೇಕು ನಾನು ಹತ್ತಾರು ಜನರಿಗೆ ನನ್ನ ತೋಟದಲ್ಲಿ ಕೆಲಸಕೊಟ್ಟು ಇರಬೇಕು ಅಂತ ಅವತ್ತೇ ಯೋಚ್ನೆ ಮಾಡ್ದೆ. 

ಯಾವತ್ತಾದ್ರೂ ಒಂದು ಒಳ್ಳೆ ಟೈಮ್ ಬರಲಿ ಅಂತ ಕಾಯುತ್ತ ಇದ್ದೆ 

ಅದಿಕ್ಕೆ ಮಾದೇವಪ್ಪ ತೀರಿಕೊಂಡಿದ್ದು ವಿಷಯ ಗೊತ್ತಾಯಿತು. ಅವರ ಮಗ ಪ್ರೇಮ್ ಗೌಡ್ರಿಗೆ ಅಮೇರಿಕಾ ಹೋಗಿ ಸೆಟ್ಲ್ ಆಗೋ ಹುಚ್ಚು ಆದ್ರೆ ಆಸ್ತಿ ಮಾರೋಕ್ಕೆ ಒಪ್ಪಿಲ್ಲ. 

ಅದಿಕ್ಕೆ ನನ್ನ ಬಿಟ್ಟು ಬೇರೆ ಯಾರಿಗೂ ಈ ತೋಟ ತೊಗೊಳೋದಿಕ್ಕೆ ಆಸೆ ಬರಬಾರದು ಅಂತ ತೋಟದಲ್ಲಿ ವನಜಾಕ್ಷಿ ದೆವ್ವ ಇದೆ. ಏನೇನೋ ಮಾಟ ಮಂತ್ರ ನಡಿತಾ ಇದೆ ಅನ್ನೋ ಹಾಗೆ ಇದೆಲ್ಲ ಮಾಡ್ದೆ. 

ವಿಷಯವೆಲ್ಲ ಕೇಳಿದ ನಂತರ ಕೀರ್ತಿ ರಂಗಸಾಮಿಯನ್ನು ಕಾನೂನು ಬದ್ದವಾಗಿ ನ್ಯಾಯಾಲಯಕ್ಕೆ ಒಪ್ಪಿಸಿ ವಿಚಾರಣೆಗೆ ಬೇಕಾದ ಸಾಕ್ಷಿಗಳನ್ನು ತಯಾರಿ ಮಾಡಲು ಕಾನ್ಸ್ಟೇಬಲ್ ಮಂಜುನಾಥನಿಗೆ ವಹಿಸಿದ. 

ಕೀರ್ತಿ, ಸುಮನ್ನು ಪ್ರಶಂಸಿಸಿ,  ಸಿರಿಲ್ ಮತ್ತು ಆತನ ಗೆಳೆಯರಿಗೆ ಧನ್ಯವಾದ ಹೇಳಿ ಪೊಲೀಸ್ ಸ್ಟೇಷನ್ನಿಂದ ಹೊರ ಕಳುಹಿಸಿದ. 

ಆದರೆ ಸಿರಿಲಾ ತನ್ನೊಂದಿಗೆ ನಡೆದ ಘಟನೆಗಳು ಬಂದೂಕಿನಲ್ಲಿ ಗುಂಡು ಹೊಡೆದ ನಂತರ ಅಲ್ಲಿ ಯಾವ ಪ್ರಾಣಿ ಇಲ್ಲದೆ ಇದ್ದದ್ದು. ರಾತ್ರಿ ಬೈಕಿನಲ್ಲಿ ಹೋಗುವಾಗ ಹಿಂದೆಯಿಂದ ಕುತ್ತಿಗೆ ಹಿಡಿದದ್ದು  ಅದನ್ನು ಸಣ್ಣಪ್ಪು ಮತ್ತು ಶಂಕರನಿಗೆ ಹೇಳಿ ಇದು ಯಾವುದು ರಂಗಸಾಮಿ ಮಾಡಿಸಿದಲ್ಲ ಎಂದು ಹೇಳುತ್ತಿರುವಾಗಲೇ. 

ಶಂಕರಣ್ಣ: ಕರಿಯನ ಹೆಂಡತಿ ಹೋಗದೆ ಇರುವ ದೇವಸ್ಥಾನವಿಲ್ಲ, ವನಜಾಕ್ಷಿ ಸತ್ತಾಗ ಆಕೆಗೆ ಇನ್ನು ಬಾಳಿ ಬದುಕುವ ಆಯಸ್ಸು ಇತ್ತು. ನೀನು ಮಾತ್ರ ಅಲ್ಲ, ನಾನು, ಊರಿನಲ್ಲಿರುವ ಎಷ್ಟೋ ಜನರ ಕಣ್ಣಿಗೆ ರಾತ್ರಿ ತೋಟದಲ್ಲಿ, ಕೆರೆಯ ಹತ್ತಿರ, ರೋಡಿನಲ್ಲಿ ಒಬ್ಬ ಗರ್ಭಿಣಿ ಹೆಂಗಸು ಕಾಣಿಸಿ ಮಾಯವಾದಂತೆಲ್ಲ ಕಾಣಿಸಿದೆ. 

ನಾವು ಯಾರಿಗೂ ಏನು ಕೆಡಕು ಮಾಡಿಲ್ಲ. ಅವತ್ತು ನೀನು ಬಂದೂಕಿನಲ್ಲಿ ಸುಟ್ಟಿದ್ದು ಬಹುಶಃ ಪ್ರೇತವಾಗಿ ಅಲೆಯುತ್ತಿದ್ದ ಆಕೆಯ ಆತ್ಮ ಇರಬಹುದು ಅದಕ್ಕೆ ಅವಳು ಎಷ್ಟೋ ವರ್ಷಗಳ ನಂತರ ನಿನಗೆ ಹೆದರಿಸಲೆಂದು ಬೈಕಿನಲ್ಲಿ ನಿನ್ನ ಹಿಂದೆ ಬಂದು ಕುತ್ತಿಗೆ ಹಿಡಿದಿದ್ದು. 

ಸರಿ ಬಿಡು ನಿನ್ನ ಬಂದೂಕಿನ ಕೇಸ್ ಇತ್ಯರ್ಥ ಆಯಿತಲ್ಲ. ಅದೇ ಖುಷಿ ಎಂದು ಎಲ್ಲರು ಕಾರಿನಲ್ಲಿ ಮನೆಗೆ ಹೊರಟರು. 

*The End*

Leave feedback about this

  • Quality
  • Price
  • Service
Choose Image